2025, Vol. 11 Issue 3, Part C
ಬಸವಣ್ಣನವರ ವಚನಗಳಲ್ಲಿ ಸಾಮಾಜಿಕ ಸಮಾನತೆ ಮತ್ತು ಸಾಮಾಜಿಕ ನ್ಯಾಯ
Author(s): ಶ್ರೀನಿವಾಸ
Abstract: 12 ನೇ ಶತಮಾನದಲ್ಲಿ ಒಂದು ಮಹತ್ವದ ಘಟನೆ ನಡೆಯಿತು ಅದುವೆ ವಚನ ಚಳುವಳಿ ಈ ಮೂಲಕ ಸಾಮಾಜಿಕ ಆಂದೋಲನವೇ ನಡೆದು ಹೋಯಿತು ಅದರ ರೂವಾರಿ ಬಸವಣ್ಣ ಎಂಬುದು ವಿಶೇಷ ಸಂಗತಿಯಾಗಿದೆ. ವಚನ ಚಳುವಳಿಯ ನೇತಾರನಾದ ಬಸವಣ್ಣನವರು ತಮ್ಮ ಕಾಲದ ಸಾಮಾಜಿಕ ಸಮಸ್ಯೆಗಳ ಕುರಿತು ಚಿಂತಿಸಿದ ಆ ಸಮಸ್ಯೆಗಳಿಗೆ ಕ್ರಾಂತಿಯ ರೀತಿಯಲ್ಲಿ ಅವುಗಳ ನಿವಾರಣೆಗೆ ಶ್ರಮಿಸಿದ. ಅದರಲ್ಲೂ ಪ್ರಮುಖವಾಗಿ ಜಾತಿ ವ್ಯವಸ್ಥೆ ಮತ್ತು ಅಸ್ಪøಶ್ಯತೆಯಂತಹ ಗಂಭೀರ ವಿಚಾರಗಳನ್ನು ತನ್ನ ವಚನಗಳ ಮೂಲಕ ದಲಿತ ಮತ್ತು ದಮನಿತ ಸಮಾಜದ ಏಳಿಗೆಯ ಕುರಿತು ತನ್ನ ವಿಚಾರಗಳನ್ನು ದಾಖಲಿಸಿದ್ದಾರೆ.
ಬಹುಶಃ ಈ ಚಳುವಳಿಯ ನೇತಾರ ಬಸವಣ್ಣನವರನ್ನು ಬಿಟ್ಟು ಬೇರೆ ಯಾರೋ ವಹಿಸಿದ್ದರು ಅಷ್ಟು ಪರಿಣಾಮಕಾರಿಯಾಗಿ ನಡಿತ್ತಿತ್ತೊ ಇಲ್ಲವೋ ಗೊತ್ತಿಲ್ಲ. ಆದರೆ, ಬಸವಣ್ಣನವರು ಈ ಜಾತಿ ವ್ಯವಸ್ಥೆಗೆ ಮೂಲ ಕಾರಣವಾಗಿಬುದಾದ ವೃತ್ತಿ ಪ್ರಭೇಧಗಳು ಮೇಲು ಕೀಳು ಎಂದು ಪರಿಣಿತವಾಗಿದ್ದ ಜಾತಿವ್ಯವಸ್ಥೆಯನ್ನು ತೊಡೆದು ಹಾಕಲು ಪ್ರಯತ್ನಿಸಿದರು. ಅವರ
ವಚನಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜಾತಿ ಮತ್ತು ಅಸ್ಪøಶ್ಯತೆ ಮುಂತಾದ ಅಂಶಗಳ ಕುರಿತು ಚರ್ಚಿಸಿದ್ದಾರೆ. ಅವುಗಳ ಕೆಲವು ಅಂಶಗಳನ್ನು ತಮ್ಮ ಮುಂದೆ ಹೇಳ ಹೊರಟಿರುವುದೇ ಈ ಸಂಶೋಧನಾ ಲೇಖನದ ಉದ್ದೇಶವಾಗಿದೆ.
Pages: 163-165 | 113 Views 54 Downloads
How to cite this article:
ಶ್ರೀನಿವಾಸ. ಬಸವಣ್ಣನವರ ವಚನಗಳಲ್ಲಿ ಸಾಮಾಜಿಕ ಸಮಾನತೆ ಮತ್ತು ಸಾಮಾಜಿಕ ನ್ಯಾಯ. Int J Kannada Res 2025;11(3):163-165.