2025, Vol. 11 Issue 3, Part B
ಎಂ.ವ್ಯಾಸ ಅವರ ಕವನಗಳಲ್ಲಿ ದೇವರ ಕುರಿತ: ವ್ಯಂಗ್ಯ-ವಿಡಂಬನೆ
Author(s): ಉಮೇಶ್ ಎಂ.ಆರ್, ಸುನೀಲ್ ಕುಮಾರ್. ವಿ
Abstract: ಸೃಜನಶೀಲ ಸಾಹಿತಿಯಾದ ಎಂ. ವ್ಯಾಸ ಅವರು ಕಾಸರಗೋಡಿನ ಮನ್ನಿಪ್ಪಾಡಿ ಕುಗ್ರಾಮದಲ್ಲಿ 22.01.1941ರಲ್ಲಿ ಸುಬ್ರಾಯ್ ಶಾನಭೋಗ ಮತ್ತು ಲಕ್ಷ್ಮಮ್ಮ ದಂಪತಿಗಳ ಮಗನಾಗಿ ಜನಿಸಿದರು. ಹುಟ್ಟೂರಿನಲ್ಲಿಯೇ ವಿದ್ಯಾಭ್ಯಾಸವನ್ನು ಮುಗಿಸಿದ ವ್ಯಾಸರು ತಂದೆ-ತಾಯಿಯ ಬಗ್ಗೆ ಅಪಾರವಾದ ಪ್ರೀತಿಯನ್ನು ಹೊಂದಿದ್ದರು. ತಂದೆಯ ಮುಗ್ಧ ಸ್ವಭಾವ, ಆದರ್ಶವನ್ನು ಜೀವನದ ಉದ್ದಕ್ಕೂ ಅಳವಡಿಸಿಕೊಂಡು ಬಂದವರು. ಕೆ.ವಿ.ತಿರುಮಲೇಶ, ಕೆ.ಟಿ.ಶ್ರೀಧರ, ವೇಣುಗೋಪಾಲ ಕಾಸರಗೋಡು, ಗಂಗಾಧರ ಭಟ್ಟ ಇವರ ಜೊತೆ ಮಾತ್ರ ಅವರ ಒಡನಾಟ. ತಂದೆಯ ಅನಿರೀಕ್ಷಿತ ಸಾವಿನಿಂದ ಓದುವುದನ್ನು ಬಿಟ್ಟು ಕೃಷಿಯ ಕಡೆಗೆ ವಾಲಿದರು. ವಿದ್ಯಾರ್ಥಿಯಾಗಿರುವಾಗಲೇ ಅವರ ಸೃಜನಶೀಲ ಪ್ರತಿಭೆ ಚಿಗುರೊಡೆದಿತ್ತು. 1960ರಿಂದ 1963ರ ವರೆಗೆ ‘ಶಶಿರಾಜ’ ಎಂಬ ಕಾವ್ಯ ನಾಮದ ಮೂಲಕ ಕಥೆಗಳನ್ನು ಬರೆಯುತ್ತಿದ್ದರು. ಅವರು ಸುಳಿ (1972) ಕ್ಷೇತ್ರ (1999) ಸೃಷ್ಟಿ (2010) ಎಂಬ ಕವನ ಸಂಕಲನವನ್ನು ಹೊರತಂದಿರುವರು. ಸತತ ಅಭ್ಯಾಸ, ನಿಷ್ಠಾವಂತ ದುಡಿಮೆ, ಹಿರಿಯರು–ಕಿರಿಯರು ಎಂದು ಭೇದವೆಣಿಸದ ಸೌಜನ್ಯಶೀಲ ನಡವಳಿಕೆ ಅವರದು. ಅಪರೂಪದ ವಿಚಾರಗಳನ್ನು ಆಯ್ಕೆ ಮಾಡಿಕೊಂಡು ಅದನ್ನು ಪದುರುಗಳಲ್ಲಿ ಬಿಡಿಸಬಲ್ಲ ಸೃಜನಶೀಲ ಕ್ರಿಯಾತಜ್ಞರು. ಹೀಗೆ ಬದುಕಿನಲ್ಲಿ ಇಟ್ಟುಕೊಂಡಿದ್ದ ಅಪಾರ ಶ್ರದ್ಧೆ, ಸಾಹಿತ್ಯ-ಸಂಸ್ಕøತಿಗಳ ಸಂವರ್ಧನೆಗಾಗಿ ಅವ್ಯಾಹಿಸಿಕೊಂಡಿದ್ದ ಸಮರ್ಪಣಾ ಮನೋಭಾವ ವ್ಯಾಸ ಅವರ ವ್ಯಕ್ತಿತ್ವದ ವಿಶಿಷ್ಟತೆಯಾಗಿದೆ. ಅವರ ಬರವಣಿಗೆಗಳಲ್ಲಿ ಮನುಷ್ಯನ ಬದುಕಿನ ಆಗುಹೋಗುಗಳ ಆಳ ಹರಹುಗಳಿವೆ. ಅವು ಕಾವ್ಯ ಪ್ರಕಾರಗಳಲ್ಲಿ ಅಭಿವ್ಯಕ್ತಗೊಂಡಿವೆ.
Pages: 90-94 | 214 Views 115 Downloads
How to cite this article:
ಉಮೇಶ್ ಎಂ.ಆರ್, ಸುನೀಲ್ ಕುಮಾರ್. ವಿ. ಎಂ.ವ್ಯಾಸ ಅವರ ಕವನಗಳಲ್ಲಿ ದೇವರ ಕುರಿತ: ವ್ಯಂಗ್ಯ-ವಿಡಂಬನೆ. Int J Kannada Res 2025;11(3):90-94.