2025, Vol. 11 Issue 2, Part C
ಕನ್ನಡ ಸಾಹಿತ್ಯದ ಹೊಸ ರೂಪಗಳು: ಒಂದು ಅವಲೋಕನ
Author(s): ಡಾ. ಬಸವರಾಜ ಎಂ. ಜನಗೌಡ
Abstract: ಈ ಲೇಖನದಲ್ಲಿ ಇತ್ತೀಚಿನ ಕಾಲದಲ್ಲಿ ಕಾಣಿಸಿಕೊಂಡಿರುವ ಕನ್ನಡ ಸಾಹಿತ್ಯದ ಹೊಸ ರೂಪಗಳನ್ನು ವಿಶ್ಲೇಷಿಸಲಾಗಿದೆ. ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದಾಗಿ ಸಾಹಿತ್ಯವು ತನ್ನ ಸಾಂಪ್ರದಾಯಿಕ ಆಚರಣೆಗಳಿಂದ ಮುಂದೆ ಸಾಗಿದ್ದು, ಹೊಸ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳುತ್ತಿರುವುದು ಗಮನಾರ್ಹವಾಗಿದೆ. ಸೈಬರ್ ಸಾಹಿತ್ಯ, ಫ್ಲಾμï ಫಿಕ್ಷನ್, ಡಿಜಿಟಲ್ ಕಾವ್ಯ, ಆಡಿಯೋ ಪುಸ್ತಕಗಳು, ಪಾಡ್‍ಕಾಸ್ಟ್ ಸಾಹಿತ್ಯ, ಗ್ರಾಫಿಕ್ ನವೆಲ್ಸ್, ಟ್ವಿಟರ್ ಕವನಗಳು ಹಾಗೂ ಇಂಟರಾಕ್ಟಿವ್ ಕಥನಗಳು ಇತ್ಯಾದಿ ರೂಪಗಳು ಕನ್ನಡ ಸಾಹಿತ್ಯದ ವ್ಯಾಪ್ತಿಯನ್ನು ವಿಸ್ತರಿಸುತ್ತಿವೆ. ಈ ಹೊಸ ರೂಪಗಳು ಯುವಜನತೆಯನ್ನು ಸಾಹಿತ್ಯದತ್ತ ಸೆಳೆಯುತ್ತಿದ್ದು, ಸಾಹಿತ್ಯವನ್ನು ಹೆಚ್ಚು ಪ್ರಸ್ತುತ ಹಾಗೂ ಸಮಕಾಲೀನವಾಗಿ ರೂಪಿಸುತ್ತಿವೆ. ಈ ಲೇಖನವು ಹೊಸ ರೂಪಗಳ ಸ್ವರೂಪ, ಪ್ರಾಮುಖ್ಯತೆ ಮತ್ತು ಭವಿಷ್ಯದ ಮೇಲೆ ಅವುಂಟುಮಾಡುವ ಪ್ರಭಾವವನ್ನು ವಿಶ್ಲೇಷಿಸುತ್ತದೆ.
Pages: 201-208 | 244 Views 95 Downloads