2025, Vol. 11 Issue 2, Part C
ಅಭಿವೃಧ್ಧಿ ಪಥದಲಿ, ವೃಕ್ಷಗಳ ತಿಥಿ.....!
Author(s): ರಮೀಝ ಬಾನು, ಡಾ. ಟಿ.ಎಸ್.ಹರ್ಷ
Abstract: “ವೃಕ್ಷ” ಅದೆಷ್ಟು ಅರ್ಥ ಪೂರ್ಣವಾದ ಪದ. ಮರ, ತರು, ಪಾದಪ, ವಿಟಪಿ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ವೃಕ್ಷ, ತನ್ನೊಳಗೆ ಅಗಾಧವಾದ ಶಕ್ತಿಯನ್ನು ಒಳಗೊಂಡಿದೆ. ಎಲ್ಲಿ ನೋಡಿದರಲ್ಲಿ ಹಸಿರು ವನರಾಶಿ, ಪಕ್ಷಿಗಳ ಚಿಲಿಪಿಲಿ, ಕಣ್ಣಿಗೆ ಮುದನೀಡುವ ವನ್ಯ ಮೃಗಗಳ ಚೆಲ್ಲಾಟ, ಬಿರುಬೇಸಿಗೆಯಲ್ಲೂ ಹಿತವಾದ ತಂಗಾಳಿ, ಮುಸ್ಸಂಜೆಯ ಅವೇಶರಹಿತ ಸೂರ್ಯಾಸ್ತ, ಮಂಜಿನ ಹನಿಗಳ ನಡುವೆ ಹೊಂಬಣ್ಣದ ಸೂರ್ಯೋದಯ. ಒಂದು ನಗರ ಅದ್ಭುತ ಗಿರಿಪ್ರದೇಶವಾಗಲು ಇನ್ನೇನು ಬೇಕು...! ಮನೆ-ಮನೆಯಲ್ಲೂ ಹಣ್ಣಿನ ಮರಗಳು, ಮನೆ ಮುಂದಿನ ತುಳಸಿ ಕಟ್ಟೆಗಳು, ಕೇವಲ 20 ಅಡಿಗಳಿಗೇ ನೀರಿರುವ ಬಾವಿಗಳು, ಉದ್ಯಾನವನಗಳು, ಹತ್ತಾರು ಕೆರೆಗಳು, ಆಟದ ಬಯಲು, ಹಚ್ಚ ಹಸಿರಿನಿಂದ ಕಂಗೊಳಿಸುವ ಪರಿಸರ. ಬಹುಶಃ ಈ ರೀತಿಯ ವರ್ಣನೆಯನ್ನು ಹಿರಿಯರಿಂದ ಅಥವಾ ಪತ್ರಿಕೆಗಳಲ್ಲಿ ಲೆಕ್ಕವಿಲ್ಲದಷ್ಟು ಸಲ ಕೇಳಿದ್ದೇವೆ, ಓದಿದ್ದೇವೆ. ಪ್ರಸ್ತುತ ಸನ್ನಿವೇಶದಲ್ಲಿ ಇವುಗಳನ್ನು ಕನಸಿನಲ್ಲಿಯೇ ಊಹಿಸಿಕೊಳ್ಳಬೇಕು. ಎಲ್ಲವೂ ಕ್ಷಣಕಾಲ. ಮನಸ್ಸು ಕಲ್ಪನೆಯ, ಭಾವಪರವಶತೆಯ ಲೋಕದಿಂದ ಮರಳುತ್ತಿದ್ದಂತೆ ಸುತ್ತಲಿನ ಹೊಗೆಸಹಿತ, ಧೂಳಿನ ಕಣಗಳ ಗಾಳಿಯೇ ಪ್ರಾಣವಾಯು, ವಾಹನಗಳ ಘರ್ಜನೆಯೇ ಇಂಪಾದ ಹಕ್ಕಿಗಳ ಕೂಗು, ಯಾಂತ್ರಿಕ ಜಗತ್ತೇ ಸರ್ವಸ್ವ.
Pages: 171-173 | 175 Views 146 Downloads