2025, Vol. 11 Issue 2, Part C
9ನೇ ತರಗತಿ ವಿದ್ಯಾರ್ಥಿಗಳು ಕೇಂದ್ರ ಮತ್ತು ರಾಜ್ಯ ಶಾಸಕಾಂಗದ ಬಗ್ಗೆ ತಿಳಿಯುವಲ್ಲಿ ತೊಂದರೆ ಎದುರಿಸುತ್ತಿದ್ದಾರೆ
Author(s): ಕುಮಾರ ಮಜರಲಿ ಕೆ ಕಲಾರಿ, ಪ್ರಶಿಕ್ಷಣಾಥಿ೯, ಮತ್ತು ಡಾ.ರಾಘವೇಂದ್ರ ವಿ ಮಾಡಳ್ಳಿ
Abstract: ಕ್ರಿಯಾ ಸಂಶೋಧನೆ ಪ್ರಾಯೋಗಿಕವಾಗಿ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಸಹಾಯವಾಗಿದೆ. ಈ ಸಂಶೋಧನೆಯ ಮೂಲಕ ಮಕ್ಕಳ ಸಮಸ್ಯೆ ಗುರುತಿಸಿ ಪರಿಹಾರ ಕಂಡುಕೊಳ್ಳಬಹುದು. ಆ ನಿಟ್ಟಿನಲ್ಲಿ ಇಂದಿನ ಪ್ರೌಢಶಾಲಾ ಹಂತದ ಮಕ್ಕಳಿಗೆ ಕೇಂದ್ರ ಮತ್ತು ರಾಜ್ಯ ಶಾಸಕಾಂಗಗಳ ಕುರಿತು ಪೂರ್ವ ಪರೀಕ್ಷೆಯನ್ನು ನಡೆಸಲಾಯಿತು, ಅದರಲ್ಲಿ ಕೆಲವೊಂದು ಗೊಂದಲಗಳನ್ನು ಗುರುತಿಸಲಾಯಿತು, ಅದರಲ್ಲಿ ಪ್ರಮುಖವಾಗಿರುವುದು ಕೇಂದ್ರ ಶಾಸಕಾಂಗ ರಾಜ್ಯ ಶಾಸಕಾಂಗ ರಚನೆ, ಅಧಿಕಾರ, ಕಾರ್ಯಗಳ ಬಗ್ಗೆ ತಿಳಿಯಲು ತೊಂದರೆ. ಆ ತೊಂದರೆಗೆ ಇರುವ ಕಾರಣಗಳನ್ನು ತಿಳಿದು ಅದನ್ನು ಪರಿಹರಿಸಲು ಚಟುವಟಿಕೆಗಳ ಮೂಲಕ ಪರಿಹಾರ ಬೋಧನೆಯನ್ನು ಕೈಗೊಂಡು ನಂತರ ಸಾಫಲ್ಯ ಪರೀಕ್ಷೆಯನ್ನು ಕೈಗೊಳ್ಳಲಾಯಿತು. ಆಗ ಗೊಂದಲಕ್ಕೆ ಅಥವಾ ತೊಂದರೆಗೆ ಒಳಗಾದ 18 ವಿದ್ಯಾರ್ಥಿಗಳ ಗೊಂದಲ ಪರಿಹಾರವಾಗಿ ಅವರು ಉತ್ತಮ ಅಂಕ ಪಡೆದಿರುವುದು ತಿಳಿದು ಬಂತು.
Pages: 161-167 | 29 Views 19 Downloads
How to cite this article:
ಕುಮಾರ ಮಜರಲಿ ಕೆ ಕಲಾರಿ, ಪ್ರಶಿಕ್ಷಣಾಥಿ೯, ಮತ್ತು ಡಾ.ರಾಘವೇಂದ್ರ ವಿ ಮಾಡಳ್ಳಿ. 9ನೇ ತರಗತಿ ವಿದ್ಯಾರ್ಥಿಗಳು ಕೇಂದ್ರ ಮತ್ತು ರಾಜ್ಯ ಶಾಸಕಾಂಗದ ಬಗ್ಗೆ ತಿಳಿಯುವಲ್ಲಿ ತೊಂದರೆ ಎದುರಿಸುತ್ತಿದ್ದಾರೆ. Int J Kannada Res 2025;11(2):161-167.