2025, Vol. 11 Issue 2, Part B
ಕವಿರಾಜ ಮಾರ್ಗ ಕೃತಿಯಲ್ಲಿ ಚಾರಿತ್ರಿಕ ಅಂಶಗಳು
Author(s): Shraddha N
Abstract: ಕನ್ನಡದ ಮೊತ್ತಮೊದಲ ಉಪಲಬ್ಧ ಕೃತಿ ಎಂಬ ಕಾರಣಕ್ಕೆ ಕನ್ನಡ ಸಾಹಿತ್ಯದಲ್ಲಿ ಕವಿರಾಜ ಮಾರ್ಗಕ್ಕೆ ಐತಿಹಾಸಿಕವಾಗಿಯೂ ಸಾಹಿತ್ಯಕವಾಗಿಯೂ ತುಂಬಾ ಮಹತ್ವವಿದೆ. ಶಾಸ್ತ್ರ ಸಾಹಿತ್ಯದ ಮತ್ತು ಪದ್ಯ ಸಾಹಿತ್ಯದ ಮೊದಲ ಕೃತಿಯಿದು. ಕಾವ್ಯ ಮೀಮಾಂಸೆಗೆ ಸಂಬಂಧಿಸಿದ ಮೊದಲ ಕೃತಿಯೂ ಹೌದು. ಸಂಸ್ಕೃತದಿಂದ ರೂಪಾಂತರ ಹೊಂದಿ ಕನ್ನಡದಲ್ಲಿ ರಚನೆಯಾದ ಮೊದಲ ಕೃತಿಯೂ ಹೌದು. ಹೀಗೇ, ಶಾಸನ ಸಾಹಿತ್ಯವನ್ನು ಹೊರತು ಪಡಿಸಿದರೆ ಕನ್ನಡ ಸಾಹಿತ್ಯದ ಹಲವು ವಿಚಾರಗಳಲ್ಲಿ ಈ ಕೃತಿಯು ಮೊದಲನೆಯ ಸ್ಥಾನವನ್ನು ಹೊಂದಿದೆ. ಆದುದರಿಂದ ಈ ಕೃತಿಯ ಅಸ್ತಿತ್ವವೇ ಚಾರಿತ್ರಿಕವಾಗಿ ಮುಖ್ಯವಾಗುತ್ತದೆ.
Pages: 111-114 | 79 Views 51 Downloads
How to cite this article:
Shraddha N. ಕವಿರಾಜ ಮಾರ್ಗ ಕೃತಿಯಲ್ಲಿ ಚಾರಿತ್ರಿಕ ಅಂಶಗಳು. Int J Kannada Res 2025;11(2):111-114.