2025, Vol. 11 Issue 2, Part B
ಕೆಳದಿ ಶಿವಪ್ಪ ನಾಯಕನ ಕಾಲದ ಕೃಷಿಯ, ಪ್ರಸ್ತುತತೆ ಕುರಿತ: ತೌಲನಿಕ ಅಧ್ಯಯನ
Author(s): ಮಲ್ಲಿಕಾರ್ಜುನ ಎಂ.ಸಿ., ಕಿರಣ್ ಕುಮಾರ್ ಆರ್. ಪಾಟೀಲ
Abstract: ಶಿವಪ್ಪ ನಾಯಕ (ಕ್ರಿ.ಶ.1645-1661) ಕೆಳದಿ ಅರಸರ ಕಾಲದಲ್ಲಿಯೇ ಅತ್ಯಂತ ಪ್ರಸಿದ್ದನಾದ ದೊರೆ. ಈತನ ಕಾಲದಲ್ಲಿ ಜಾರಿಗೆ ತಂದ ಸಿಸ್ತು ಎಂಬ ಕಂದಾಯ ವ್ಯವಸ್ಥೆಯು ಕಾನೂನಿನ ಚೌಕಟ್ಟನ್ನು ಒಳಗೊಂಡಿತ್ತು. ಸಿಸ್ತು ಎಂದರೆ ಒಂದು ಪ್ರಮಾಣೀಭೂತವಾದ ಭೂಕಂದಾಯ ದರವಾಗಿದ್ದು, ಇದು ಇಡೀ ದೇಶಕ್ಕೆ ಇಂದಿಗೂ ಮಾದರಿಯಾಗಿ ಕಂಡುಬರುತ್ತಿದೆ. ಶಿವಪ್ಪ ನಾಯಕನ ಭೂಮಿ ಆಧಾರಿತ ಕಂದಾಯದ ನಿಗದಿ ಅಂದರೆ ಸಿಸ್ತು ಆಧುನಿಕ ಹಾಗೂ ವೈಜ್ಞಾನಿಕವಾಗಿತ್ತು ಎಂಬುದನ್ನು ಕಂಡುಕೊಳ್ಳಬಹುದಾಗಿದೆ. ಶಿವಪ್ಪ ನಾಯಕರೇ ನ್ಯಾಯ ಸಮ್ಮತವಾದ ಕಂದಾಯ ನಿಗದಿಪಡಿಸಲು ಸ್ವತಃ ವಿವಿಧ ಬೆಳೆಗಳನ್ನು ಬೆಳೆದು, ಮಾರುಕಟ್ಟೆಗಳನ್ನು ಪರೀಕ್ಷಿಸಿ, ಮಣ್ಣಿನ ಸಾಮರ್ಥ್ಯವನ್ನು ಪರೀಕ್ಷಿಸಿ, ಪ್ರಾಯೋಗಿಕ ರೀತಿಯಲ್ಲಿ ಕ್ರಮಕೈಗೊಂಡು ನಿಗದಿಗೊಳಿಸುತ್ತಿದ್ದುದು ಇವರ ವೈಶಿಷ್ಠ್ಯತೆಯಾಗಿದೆ. ಭೂಮಿಯ ಕಂದಾಯವನ್ನು ನಿಗದಿಗೊಳಿಸುವ ಪೂರ್ವದಲ್ಲಿ ರಾಜ್ಯದ ಖರ್ಚಿನಿಂದಲೇ ಆ ಭೂಮಿಯನ್ನು ಸಾಗುವಳಿ ಮಾಡಿಸಿ ರಾಜಾದಾಯವನ್ನು ಗೊತ್ತುಪಡಿಸಿರುವುದು ಹಲವು ಉಲ್ಲೇಖಗಳಿಂದ ದೊರೆಯುತ್ತದೆ. ಮಣ್ಣಿನ ಗುಣಮಟ್ಟದ ಆಧಾರದ ಮೇಲೆ ಭೂಮಿಯನ್ನು 5 ಭಾಗಗಳಾಗಿ ಮಾಡಿ, ಅದರಿಂದ ಉತ್ಪಾದನೆಯಾದ ಬೆಳೆಯ ಮಾರುಕಟ್ಟೆಯ ಬೆಲೆಗಳನ್ನು ಸರಾಸರಿ ನಿರ್ಧರಿತ ಆಧಾರದ ಮೇಲೆ ನಿಗದಿಗೊಳಿಸಲಾಗುತ್ತಿದ್ದುದು ಇಂದಿಗೂ ಮಾದರಿಯಾಗಿ ಕಂಡುಬರುತ್ತಿದೆ. ಶಿವಪ್ಪ ನಾಯಕರು ಬಹಳ ಆಸಕ್ತಿಯಿಂದ ಈ ಪದ್ಧತಿಯನ್ನು ರೂಪಿಸಿದ್ದು, ಅವಶ್ಯವಿದ್ದಾಗ ಮಾತ್ರ ಇತರೆ ಶುಲ್ಕಗಳನ್ನು ಸೇರಿಸಿ ವಿಧಿಸುತ್ತಿದ್ದರು. ಅಲ್ಲದೆ ಕೆಳದಿ ಅರಸರ ಕಾಲದಲ್ಲಿ ಸಿದ್ದಾಯ, ಬಿರಾಡ, ಕುಳಬಿರಾಡ, ಅರೆವಾಸಿ ಎಂಬ ತೆರಿಗೆಗಳನ್ನು ವಿಧಿಸಲಾಗುತ್ತಿತ್ತು. ಆ ಕಾಲ ಕೃಷಿ ಪದ್ಧತಿ, ಕಂದಾಯ ಪದ್ಧತಿಗಳು ಇಂದಿಗೂ ಹೇಗೆ ಪ್ರಸ್ತುತವಾಗಿದೆ ಎಂಬುದನ್ನು ಆಧಾರ ಸಹಿತವಾಗಿ ತುಲನಾತ್ಮಕವಾಗಿ ಅಧ್ಯಯನ ಕೈಗೊಳ್ಳಲಾಗಿದೆ.
Pages: 100-110 | 77 Views 68 Downloads
How to cite this article:
ಮಲ್ಲಿಕಾರ್ಜುನ ಎಂ.ಸಿ., ಕಿರಣ್ ಕುಮಾರ್ ಆರ್. ಪಾಟೀಲ. ಕೆಳದಿ ಶಿವಪ್ಪ ನಾಯಕನ ಕಾಲದ ಕೃಷಿಯ, ಪ್ರಸ್ತುತತೆ ಕುರಿತ: ತೌಲನಿಕ ಅಧ್ಯಯನ. Int J Kannada Res 2025;11(2):100-110.