2025, Vol. 11 Issue 2, Part B
ಪ್ರತಿಭಾ ನಂದಕುಮಾರ್‍ರ ಬರಹಗಳಲ್ಲಿ ಸ್ತ್ರೀಸಂವೇದನೆ
Author(s): ಕನ್ಯಾಕುಮಾರಿ.ಎಸ್, ಡಾ.ಕೆ.ಶಾರದ
Abstract: ಸ್ತ್ರೀಸಂವೇದನೆಯ ಆಧುನಿಕ ದೃಷ್ಟಿಕೋನಗಳನ್ನಿರಿಸಿಕೊಂಡಿರುವ ಪ್ರತಿಭಾ ನಂದಕುಮಾರ್ ಮಹಿಳಾ ಶಕ್ತಿಶಾಲಿ ಬರವಣಿಗೆಗಳು ಸ್ತ್ರೀಯ ಜೀವನಶೈಲಿಯನ್ನು ಬದಲಾಯಿಸಲು ಹಾಗೂ ಉತ್ತಮ ಜೀವನ ರೂಪಿಸಿ ಕೊಳ್ಳಲು ಸಹಕಾರಿಯಾಗುತ್ತವೆ ಎಂಬ ವಿಶ್ವಾಸ ಹೊಂದಿರುವವರು. ಇವರ ಬರವಣಿಗೆಗಳಲ್ಲಿ ಸ್ತ್ರೀ ವಿರೋಧಿ ನೀತಿಗಳನ್ನು ಪ್ರತಿರೋಧಿಸುವ ಗುಣಗಳಿವೆ. ಸ್ತ್ರೀ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವ ಯಾವುದೇ ಸಂಗತಿಗಳಾಗಲಿ ಪ್ರಶ್ನಿಸುವ ದಿಟ್ಟತೆಯಿದೆ. ಸ್ತ್ರೀ ವಿಮೋಚನೆ, ಸ್ತ್ರೀ ಸ್ವಾತಂತ್ರ್ಯದ ಪರಿಭಾಷೆಗಳ ಬಗ್ಗೆ ಮಾತಾನಾಡಿದರಷ್ಟೇ ಬದಲಾವಣೆಗಳಾಗಲಾರವು ಎನ್ನುವ ಅಭಿಪ್ರಾಯವಿರಿಸಿಕೊಂಡಿರುವ ಇವರು ಸಾಮಾಜಿಕ ಅಸಮಾನತೆಗಳನ್ನು ನಿಸ್ಸಂಕೋಚವಾಗಿ ಸಶಕ್ತಕಾರಿಯಾಗಿ ಬರೆದು ಪ್ರಕಟಿಸುತ್ತಾರೆ. ಇದು ಪ್ರತಿಭಾರವರ ಅಂಕಣ ಬರಹಗಳ ವಿಶೇಷತೆ.
ಬಹುಮುಖ ಪ್ರತಿಭೆ ಪ್ರತಿಭಾ ನಂದಕುಮಾರ್ ಕನ್ನಡದ ಪ್ರಮುಖ ಕವಿ, ಪತ್ರಕರ್ತೆ, ಅಂಕಣಕಾರ್ತಿ ಮತ್ತು ಅನುವಾದಕಿಯಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವವರು. ಇವರು ಭಾಷಾಂತರಕಾರರಾಗಿ, ನಂತರ (ಇಂಡಿಯನ್ ಎಕ್ಸ್‍ಪ್ರೆಸ್, ಡೆಕನ್‍ಹೆರಾಲ್ಡ್ ಮತ್ತು ಅಗ್ನಿ ಪತ್ರಿಕೆಗಳಲ್ಲಿ) ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ಚಲನ ಚಿತ್ರರಂಗದಲ್ಲಿ ನಿರ್ದೇಶಕಿ, ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿರುವುದು ಇವರ ವಿಶೇಷ.
ಸಾಹಿತ್ಯರಂಗದಲ್ಲಿ ಕ್ರಿಯಾಶೀಲರಾಗಿ ಕವನ, ಕಾವ್ಯ, ಅಂಕಣ, ನಾಟಕ, ಸಣ್ಣಕಥೆಗಳ ರಚನೆ ಹಾಗೂ ಅನುವಾದ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.
Pages: 90-95 | 19 Views 11 Downloads
How to cite this article:
ಕನ್ಯಾಕುಮಾರಿ.ಎಸ್, ಡಾ.ಕೆ.ಶಾರದ. ಪ್ರತಿಭಾ ನಂದಕುಮಾರ್‍ರ ಬರಹಗಳಲ್ಲಿ ಸ್ತ್ರೀಸಂವೇದನೆ. Int J Kannada Res 2025;11(2):90-95.