ಕರಾವಳಿಯ ತುಳು ನಾಟಕ ಪರಂಪರೆಯ ಆರಂಭದ ಹೆಜ್ಜೆಗುರುತು ಮತ್ತು ಸಾಧಕರು
2025, Vol. 11 Issue 1, Part C
ಕರಾವಳಿಯ ತುಳು ನಾಟಕ ಪರಂಪರೆಯ ಆರಂಭದ ಹೆಜ್ಜೆಗುರುತು ಮತ್ತು ಸಾಧಕರು
Author(s): ಕೇಶವ ಬಂಗೇರ ಬಿ, ಧನಂಜಯ ಕುಂಬ್ಳೆ
Abstract: ತುಳುಭಾಷೆಯ ನಾಟಕಗಳಿಗೆ ಎಂಟು ದಶಕಗಳ ಸುದೀರ್ಘ ಇತಿಹಾಸವಿದೆ. ಕರಾವಳಿಯ ಬಹುಭಾಷೆಗಳಾದ ಕನ್ನಡ, ಹವ್ಯಕ, ಕುಂದಗನ್ನಡ, ಕೊಂಕಣಿ, ಮಲಯಾಳ, ಬ್ಯಾರಿ, ಮತ್ತು ಇತರ ಭಾಷೆಗಳನ್ನಾಡುವ ಜನರು ತುಳು ಭಾಷೆಯ ನಾಟಕಗಳನ್ನು ಹೆಚ್ಚು ಪ್ರೀತಿಸುತ್ತಾ ಬಂದಿದ್ದಾರೆ. ಮನೆಮಾತು ಅನ್ಯ ಭಾಷೆಯಾಗಿದ್ದರೂ ತುಳು ಭಾಷೆಯ ಅಭಿಮಾನದಿಂದ ಕರಾವಳಿಯ ತುಳುಭಾಷೆಯ ನಾಟಕ ಪ್ರದರ್ಶನಗಳಿಗೆ ಈಗ ಪ್ರೇಕ್ಷಕ ವರ್ಗ ಬಹು ಸಂಖ್ಯೆಯಲ್ಲಿ ನೆರೆಯುತ್ತಿರುವುದು ಗಮನಿಸತಕ್ಕ ವಿಚಾರವಾಗಿದೆ. ನಾಟಕಗಳು ಕರಾವಳಿಯ ಗ್ರಾಮ ಗ್ರಾಮಗಳಲ್ಲಿಯೂ ಪ್ರತೀ ಸಂದರ್ಭಗಳಲ್ಲಿ ಬಹು ಬೇಡಿಕೆಯ ಮಾಧ್ಯಮವಾಗಿ ಬೆಳೆದಿರುವುದು ಸಂತೋಷದಾಯಕ ಸಂಗತಿಯಾಗಿದೆ. ಅಂಕಿ ಅಂಶಗಳ ಪ್ರಕಾರ ಸರಿಸುಮಾರು ಮುನ್ನೂರರಿಂದ ನಾಲ್ನೂರೈವತ್ತಕ್ಕೂ ಮಿಕ್ಕಿದ ಭಿನ್ನ ಭಿನ್ನ ಆಶಯಗಳ ನಾಟಕಗಳು ಪ್ರಕಟಗೊಂಡಿದೆ ಎಂದು ಅಂದಾಜಿಸಲಾಗಿದೆ. ಐದು ಸಾವಿರಕ್ಕಿಂತಲೂ ಹೆಚ್ಚು ನಾಟಕಗಳು ಪ್ರಕಟಗೊಳ್ಳದೇ ಹಸ್ತಪ್ರತಿಯಲ್ಲಿಯೇ ಉಳಿದು ಕೇವಲ ರಂಗ ಪ್ರದರ್ಶನಗೊಂಡು ಜನಮೆಚ್ಚುಗೆ ಪಡೆದ ನಿದರ್ಶನಗಳಿವೆ.
ಕೇಶವ ಬಂಗೇರ ಬಿ, ಧನಂಜಯ ಕುಂಬ್ಳೆ. ಕರಾವಳಿಯ ತುಳು ನಾಟಕ ಪರಂಪರೆಯ ಆರಂಭದ ಹೆಜ್ಜೆಗುರುತು ಮತ್ತು ಸಾಧಕರು. Int J Kannada Res 2025;11(1):142-149. DOI: 10.22271/24545813.2025.v11.i1c.1091