2025, Vol. 11 Issue 1, Part B
ವಿಜ್ಞಾನ, ಕಲೆ ಮತ್ತು ಸಾಹಿತ್ಯಗಳ ಸಂಬಂಧ
Author(s): ಸೌಮ್ಯ ಹೆಚ್.ಎಲ್, ಹೆಚ್.ಎಲ್.ರೇಖಾ
Abstract: ಮಾನವನ ಬದುಕಿಗೆ ವಿಜ್ಞಾನ ಮತ್ತು ಕಲೆ ಈ ಎರಡೂ ವಿಷಯಗಳು ಮಹತ್ವದ ಪಾತ್ರವಹಿಸುತ್ತ ಬಂದಿವೆ. ಮನುಷ್ಯನು ಮೂಲತಃ ಪ್ರಾಣಿಯೇ ಆಗಿದ್ದರೂ ವಿಜ್ಞಾನ, ಕಲೆ ಮತ್ತು ಅದರ ಅಂಗವಾದ ಸಾಹಿತ್ಯಗಳ ಸಂಸರ್ಗದಿಂದ ಭಿನ್ನನಾಗಿ ವಿಶ್ವದಲ್ಲಿ ಗುರುತಿಸಿಕೊಂಡಿದ್ದಾನೆ. ಆದಿ ಮಾನವನು ತನ್ನೊಟ್ಟಿಗಿರುವ ಇತರ ಪ್ರಾಣಿಗಳಂತೆಯೇ ಆಹಾರ, ಭಯ, ನಿದ್ರೆ, ಮೈಥುನ ಎಂಬ ಪ್ರಾಣಿಸಹಜವಾದ ಮೂಲಭೂತ ಗುಣಗಳನ್ನು ಆರಂಭದಲ್ಲಿ ಹೊಂದಿದ್ದನು. ಕಾಲಾನಂತರದಲ್ಲಿ ಆತನ ಮೆದುಳು ವಿಕಸಿತವಾಗುತ್ತ ಹೋದಂತೆ ಅಗ್ನಿಯ ಶೋಧ ಮತ್ತು ಅದರ ನಿಯಂತ್ರಣಗಳ ಕಡೆಗೆ ಗಮನಹರಿಸಿದ. ಅಲ್ಲಿಂದ ಬೇಯಿಸಿದ ಮಾಂಸವನ್ನು, ಸಸ್ಯಾಹಾರವನ್ನು ತಿನ್ನಲು ಪ್ರಾರಂಭಿಸಿ ಕೃಷಿಚಟುವಟಿಕೆಗಳ ಕಡೆಗೆ ಗಮನಹರಿಸಿದ. ಅಲ್ಲಿಂದ ಪ್ರಾರಂಭಗೊಂಡ ಆತನ ಜೀವನ ಪಯಣವು ನಮ್ಮ ಸಂದರ್ಭದ ನಾಗರಿಕ ಜೀವನದವರೆಗೆ ಹಲವು ಮಜಲುಗಳನ್ನು ದಾಟಿ ಬಂದಿದೆ. ಅವನ ಸುದೀರ್ಘ ಪ್ರಯಾಣದಲ್ಲಿ ಅನೇಕ ಆವಿಷ್ಕಾರಗಳು, ವಿಜ್ಞಾನ, ಸಂಗೀತ, ಚಿತ್ರಕಲೆ, ಸಾಹಿತ್ಯ, ಶಿಲ್ಪ, ಮುಂತಾದ ಲಲಿತಕಲೆಗಳು ಬಹುಮುಖ್ಯ ಪಾತ್ರವನ್ನು ವಹಿಸಿವೆ. ಅವುಗಳಲ್ಲಿ ವಿಜ್ಞಾನದ ಜೊತೆಜೊತೆಗೆ ಕಲೆ ಮತ್ತು ಸಾಹಿತ್ಯಗಳು ಕೂಡ ಎದ್ದುಕಾಣುವ ಸಂಗತಿಗಳಾಗಿವೆ. ಪ್ರಸ್ತುತ ಲೇಖನದಲ್ಲಿ ವಿಜ್ಞಾನ, ಕಲೆ ಮತ್ತು ಸಾಹಿತ್ಯ ಈ ಮೂರು ವಿಷಯಗಳ ಸಂಬಂಧಗಳನ್ನು ವಿವರಿಸಲಾಗಿದೆ.
Pages: 75-79 | 65 Views 30 Downloads