2025, Vol. 11 Issue 1, Part A
Abstract: ಭಾರತೀಯ ಮತ್ತು ಪಾಶ್ಚಾತ್ಯ ದೃಷ್ಟಿಗಳೆರಡರಿಂದಲೂ ಕಾಳಿದಾಸನನ್ನು ಸಂಸ್ಕೃತ ಸಾಹಿತ್ಯದ ಸರ್ವ ಮಾನ್ಯನಾದ ಕವಿ ಎಂಬುದಾಗಿ ಆದರಿಸುತ್ತಾರೆ. ನಾಟ್ಯ ಕಲೆಯ ಸೌಂದರ್ಯ, ಕಾವ್ಯಗಳಲ್ಲಿನ ವರ್ಣನಾ ಶೈಲಿ, ಖಂಡ ಮತ್ತು ಗೀತಕಾವ್ಯಗಳ ಸರಸವಾದ ಹೃದಯ ಭಾವನೆ, ಇವೆಲ್ಲದರಲ್ಲಿಯೂ ಕಾಳಿದಾಸನ ಪ್ರತಿಭೆಯು ಸರ್ವತೋಮುಖವಾಗಿದೆ. ಅವನ ಖ್ಯಾತಿಯು ಎಷ್ಟು ನಿಶ್ಚಿತವಾಗಿದೆಯೋ, ಅವನ ಸಮಯವು ಅಷ್ಟೇ ಅನಿಶ್ಚಿತವಾಗಿದೆ. ಉಜ್ಜಯಿನೀ ಪ್ರದೇಶವಲ್ಲದೇ ಬಂಗಾಳ ಮತ್ತು ಕಾಶ್ಮೀರಗಳನ್ನು ಕಾಳಿದಾಸನ ಜನ್ಮ ಸ್ಥಾನವೆಂದು ಹೇಳುತ್ತಾರೆ. ಕಾಳಿದಾಸನು ನಿಸ್ಸಂದೇಹವಾಗಿ ಶೈವನಾಗಿದ್ದನು. ಅವನು ಉಜ್ಜಿ ನಿಯಲ್ಲಿನ ಜ್ಯೋತಿರ್ಲಿಂಗವಾದ ಮಹಾಕಾಲನ ಉಪಾಸಕನಾಗಿದ್ದನೆಂಬುದು ನಮ್ಮ ಅಭಿಪ್ರಾಯ. ಮೇಘದೂತದಲ್ಲಿ ಮಹಾಕಾಲನ ಉಪಾಸನೆಗಾಗಿ ತೋರಿಸುವ ಅವನ ಆಸಕ್ತಿಯೇ ಇದಕ್ಕೆ ಆಧಾರವೆಂದು ಅಂಗೀಕರಿಸಬಹುದು. ಮಹಾಕಾಲನ ವರ್ಣನೆ ಮಾಡುತ್ತಾ ಯಕ್ಷನು ಮೇಘಕ್ಕೆ ಹೇಳುತ್ತಾನೆ- ಉಜ್ಜಿನಿಯನ್ನು ನೀನು ಯಾವ ಸಮಯದಲ್ಲಿ ತಲಪಿದರೂ ಸಹ ಸೂರ್ಯನು ಅಸ್ತನಾಗುವವರೆವಿಗೂ ನೀನು ಅಲ್ಲಿ ಇರಬೇಕು. ಪ್ರದೋಷ ಪೂಜೆಯ ಸಮಯದಲ್ಲಿ ನೀನು ಸ್ನಿಗ್ಧ ಗಂಭೀರ ಘೋಷವನ್ನು ಮಾಡಬೇಕು, ಅದು ಮಹಾಕಾಲನ ಪೂಜೆಯ ಸಮಯದಲ್ಲಿ ನಗಾರಿಯ ಕೆಲಸವನ್ನು ಮಾಡುತ್ತದೆ. ಹೀಗೆ ಅಮೋಘವಾದ ವರ್ಣನೆಮಾಡಿದ್ದಾನೆ. ಇದು ಕವಿಯ ಧಾರ್ಮಿಕತೆ ಮತ್ತು ರಾಷ್ಟ್ರೀಯ ಮನೋಭಾವನೆಯ ಪ್ರತಿಬಿಂಬವಾಗಿದೆ.
ರಘುವಂಶ ಭಾರತೀಯ ವಿಮರ್ಶಾಪರಂಪರೆಯು ರಘುವಂಶವನ್ನು, ಕಾಳಿದಾಸನ ಸರ್ವಶ್ರೇಷ್ಠ ಕೃತಿ ಎಂದು ಆದರಿಸುತ್ತದೆ. ಆದುದರಿಂದ ಕಾಳಿದಾಸನಿಗೆ ಮಾತ್ರ "ರಘುಕಾರ” ಎಂಬ ಹೆಸರು ಪ್ರಯುಕ್ತವಾಗಿದೆ. ಬೇರೆ ಬೇರೆ ಕಾಲಗಳಲ್ಲಿ ರಚಿತವಾಗಿ ಉಪಲಬ್ಧವಾಗಿರುವ ಸುಮಾರು 40 ವ್ಯಾಖ್ಯಾನಗಳು, ಈ ಗ್ರಂಥವು ಎಷ್ಟು ಜನಪ್ರಿಯ ಹಾಗೂ ವ್ಯಾಪಕವಾಗಿತ್ತೆಂಬುದನ್ನು ಸೂಚಿಸುತ್ತದೆ. ಕಾಳಿದಾಸನ ಪಾತ್ರಗಳು ಜೀವನ ಶಕ್ತಿಯಿಂದ ಸಂಪನ್ನವಾದ ಜೀವಂತ ಜಗತ್ತಿನ ವ್ಯಕ್ತಿಗಳು. ಆತನ ಶಕುಂತಲೆಯು ಪ್ರಕೃತಿಯ ಕನ್ಯೆ, ಆಶ್ರಮದ ನಿಸರ್ಗ ಬಾಲಿಕಾ, ಮತ್ತು ಅವಳ ಜೀವನವನ್ನು ಬಾಹ್ಯಪ್ರಕೃತಿಯು ಕೋಮಲ ಮತ್ತು ಸ್ನಿಗ್ಧವನ್ನಾಗಿ ಮಾಡಿದೆ. ಹಿಮವಂತನ ಮಗಳಾದ ಪಾರ್ವತಿಯುತಪಸ್ಸುಮತ್ತುಪಾತಿವ್ರತ್ಯದಪ್ರತೀಕ, ಮತ್ತುಅವಳಕಠೋರವಾದತಪಸ್ಸಿನಮುಂದೆಋಷಿಗಳೂಸಹತಮ್ಮತಲೆಯನ್ನುತಗ್ಗಿಸುತ್ತಾರೆ. ಧೀರತೆಯಮೂರ್ತಿಧಾರಿಣೀದೇವಿ. ಚಪಲಪ್ರೇಮದಮೂರ್ತಿಯಾದಮಾಳವಿಕಾ, ಉನ್ಮತ್ತಪ್ರೇಮದ ಅಧಿಕಾರಿಣಿಯಾದ ಊರ್ವಶೀ, ಪರಸ್ಪರಈರ್ಷ್ಯಾಮತ್ತುಪ್ರಣಯದಪ್ರತಿನಿಧಿಯಾದಇರಾವತೀ, ಇವರುಗಳುಸಂಸ್ಕೃತಸಾಹಿತ್ಯದಲ್ಲಿಅವಿಸ್ಮರಣೀಯರಾದಸ್ತ್ರೀಪಾತ್ರಗಳು. ಆದರ್ಶಪಾತ್ರಗಳಚಿತ್ರಣದಲ್ಲಿರಘುವಂಶವುಅದ್ವಿತೀಯವಾದುದು.