2025, Vol. 11 Issue 1, Part A
ಪೂಜ್ಯಶ್ರೀ ಸಿದ್ಧೇಶ್ವರ ಸ್ವಾಮಿಗಳು ವಿರಚಿತ; ‘ಶ್ರೀಮದ್ಭಗವದ್ಗೀತಾ -ಜ್ಞಾನಯೋಗ ಸಂಪುಟ-4’
Author(s): ಗುರುಸ್ವಾಮಿ ಹಿರೇಮಠ
Abstract: ಭಾರತೀಯ ತತ್ವಶಾಸ್ತ್ರ ಹುಟ್ಟುಹಾಕಿದ ಬದುಕಿನ ಉದಾತ್ ಚಿಂತನೆಗಳು, ವೇದ-ಉಪನಿಷತ್‍ಗಳು ರೂಪಿಸಿದ ಬದುಕಿನ ವಿಸ್ತಾರತೆ, ಗೀತೆಯು ನೀಡಿದ ಬದುಕಿನ ಸಾರವತ್ತತೆ, ವಚನಕಾರರು ಸೃಷ್ಠಿಸಿದ ಸಂಚಲನ ಮತ್ತು ಅಸ್ಮಿತೆಯು ಸಾಮಾಜಿಕ, ಧಾರ್ಮಿಕ ಹಾಗೂ ಬದುಕಿನ ವಿವಿಧ ಆಯಾಮಗಳಿಗೆ ಪ್ರೇರಣೆ ಮತ್ತು ಜೀವಪರ ಚಿಂತನೆಗಳಿಗೆ ಮೂಲವಾದುದು. ಅದು ಕನ್ನಡ ಸಾಹಿತ್ಯದಲ್ಲಿ ಇಂದಿಗೂ ಜೀವಸೆಲೆಯಾಗಿ ಅಂತರ್ಗತವಾಗಿದೆ. ವೇದಕಾಲದಿಂದ ಪ್ರಾರಂಭವಾದ ಋಷಿ-ಮುನಿಗಳ ಪರಂಪರೆ, ವಚನಕಾರರ ಬದುಕು-ಬರಹಗಳಿಂದ ಪ್ರಭಾವಿತ, ಪ್ರೇರಣೆಗೊಂಡು ಇಂದಿಗೂ ಮಾನ್ಯವಾದ ಬದುಕಿಗೆ ಸಾಕ್ಷಿಯಾದವರನ್ನು ಸಾಹಿತ್ಯ ಮತ್ತು ಚರಿತ್ರೆಯು ದಾಖಲಿಸುತ್ತಾ ಬಂದಿದೆ. ಪಂಪನಿಂದ ಪ್ರಾರಂಭಗೊಂಡು ಹರಿಹರ ಚಾಮರಸ, ರಾಘವಾಂಕ, ಭೀಮಕವಿ, ಯಡೆಯೂರು ಸಿದ್ಧಲಿಂಗ ಯತಿಗಳು, ನೂರೊಂದು ವಿರಕ್ತ ಪರಂಪರೆಯ ವಚನಕಾರರು ಇಂತಹ ಮಹತ್ವದ ಕಾರ್ಯಕ್ಕೆ ಸಾಕ್ಷಿಯಾದವರು. ಇದು ಆಧುನಿಕ ಕಾಲ-ಸಂದರ್ಭದಲ್ಲಿಯೂ ಮುಂದುವರೆಯುವ ಮೂಲಕ ಋಷಿ-ಮಿನಿಗಳ, ಶರಣರ, ಕೀರ್ತನಕಾರರ ಬದುಕಿನ ಪರಂಪರೆಯನ್ನು ಜೀವಂತವಾಗಿಸಿದೆ. ತಮ್ಮ ಕುಲಕಸಬುಗಳೊಂದಿಗೆ ವ್ಯಷ್ಠಿಯಾಗಿದ್ದ ಬದುಕನ್ನು ಸಮಷ್ಠಿಗೆ ಬದಲಾಯಿಸಿಕೊಂಡು ತಮ್ಮ ಅಂತರಂಗದ ಅನುಭೂತಿಗೆ ದಕ್ಕಿದ ಅನುಭಾವವನ್ನು ತಮ್ಮ ಅಂತರಂಗದಲ್ಲಿ ಮನೆ ಮಾಡಿದ್ದ ಅವಗುಣಗಳನ್ನು ಶೋಧಿಸಿಕೊಂಡು ಜಾತಿ-ಧರ್ಮ-ಜನಾಂಗಗಳನ್ನು ಮೀರಿ ಮಾನವೀಯ ನೆಲೆಯ, ಕಾಲಾತೀತವಾದ ಉದಾತ್ ಬದುಕಿಗೆ ಸಾಕ್ಷಿಯಾದವರ ಬದುಕನ್ನು ತಮ್ಮ ವಚನ, ನುಡಿಗಳ, ಕಾವ್ಯಗಳ ಮೂಲಕ ಕಟ್ಟಿಕೊಡುವಲ್ಲಿ ಪ್ರತಿಯೊಬ್ಬರೂ ರೂಪಿಸಿಕೊಂಡ ಆತ್ಮ ವಿಮರ್ಶೆ ಮತ್ತು ಆತ್ಮ ನಿರೀಕ್ಷಣೆಯಂತಹ ಪ್ರಯೋಗಾತ್ಮಕ ಸಂಗತಿಗಳು ಇಂದಿಗೂ ಮುಖ್ಯವೆನಿಸುತ್ತವೆ. ಇಂತಹ ಜ್ಞಾನದ ವಿಚಾರಗಳನ್ನು ಇಡೀ ಮನುಕುಲಕ್ಕೆ ಅನ್ವಯವಾಗುವಂತೆ ತಿಳಿಸಿದವರು ಶ್ರೀ ಸಿದ್ಧೇಶ್ವರ ಸ್ವಾಮಿಗಳು. ಅವರು ಇಂತಹ ಪ್ರವಚನಗಳ ಜೊತೆಗೆ ಅತ್ಯಮೂಲ್ಯವಾದ ಗ್ರಂಥಗಳನ್ನು ಜ್ಞಾನಪರಂಪರೆಗೆ ನೀಡಿದವುಗಳಲ್ಲಿ ಪ್ರಸ್ತುತ ಕೃತಿಯು ಸಹ ಮಹತ್ವದಾಗಿರುವುದನ್ನು ಓದುಗ ವಲಯ ಅನುವಿಸುತ್ತಿದೆ. ಇಂತಹ ಕೃತಿಯೊಂದರ ಅವಲೋಕನ ಇದಾಗಿದೆ.
Pages: 07-09 | 112 Views 46 Downloads