2024, Vol. 10 Issue 4, Part A
ತ.ರಾ.ಸು ಅವರ ಕಾದಂಬರಿ ಬಿಡುಗಡೆಯ ಬೇಡಿ: ಪ್ರಭಾವತಿ ಪಾತ
Author(s): ನಾಗಮಣಿ ಕೆ
Abstract: ಪ್ರಗತಿಶೀಲ ಕಾದಂಬರಿಲೋಕ ಬಹು ವಿಶಿಷ್ಠವಾದುದು. ಸ್ವಾತಂತ್ರ್ಯದ ಕಾಲಘಟ್ಟ ಹಾಗೂ ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ನಡೆದ ತಲ್ಲಣಗಳನ್ನು ಕಥನ ಸಾಹಿತ್ಯವು ಕಟ್ಟಿಕೊಡುವ ಪಯತ್ನವನ್ನು ಮಾಡುತ್ತಾ ಬಂತು. ಅಂತಹ ಕಥನ ಸಾಹಿತ್ಯದಲ್ಲಿ ಪ್ರಮುಖವಾಗಿ ಗುರುತಿಸಲ್ಪಡುವ ಹೆಸರುಗಳೆಂದರೆ ತರಾಸು, ಬಸವರಾಜು ಕಟ್ಟೀಮನಿ, ನಿರಂಜನ, ಅ.ನ.ಕೃ, ವಿ. ಎಂ. ಇನಾಂದಾರ್ ಮೊದಲಾದವರಾಗಿದ್ದಾರೆ. ಇವರ ಇಡೀ ಕಥನ ಸಾಹಿತ್ಯವು ರಾಷ್ಟ್ರೀಯತೆ ಮತ್ತು ಉಪರಾಷ್ಟ್ರೀಯತೆಯ ಪರಿಕಲ್ಪನೆಗಳನ್ನು ಚರ್ಚಿಸುತ್ತಲೇ ಅಂದಿನ ಸಮಾಜಕ್ಕೆ ಬೇಕಾಗಿರುವ ಮಾಕ್ಸ್‍ಇಸಂ, ಸೋಷಿಯಲಿಸಂ ಅನ್ನು ಸಮರ್ಥವನ್ನು ಕರ್ನಾಟಕ ಸಾಹಿತ್ಯ ಮತ್ತು ಸಮಾಜದಲ್ಲಿ ಕಟ್ಟಿಬೆಳೆಸಿದವರು ಇವರಾಗಿದ್ದಾರೆ. ಅದರಲ್ಲಿಯೂ ಆಧುನಿಕತೆಗೆ ತೆರೆದುಕೊಳ್ಳುತ್ತಿರುವ ನೆಲೆಗಳನ್ನೂ ಸ್ತ್ರೀ ಸಂವೇದನೆಯನ್ನೂ ಸೂಕ್ಷ್ಮಗ್ರಾಹಿಯಾಗಿ ಕಟ್ಟಿಕೊಟ್ಟಿರುವುದು ಕಂಡುಬರುತ್ತದೆ. ಇದು ಈ ಹೊತ್ತಿಗೂ ಮುಖ್ಯವಾದ ಮತ್ತು ಗಮನೀಯವಾದ ಪ್ರಶ್ನೆಗಳೇ ಆಗಿವೆ.
Pages: 48-50 | 10 Views 7 Downloads
How to cite this article:
ನಾಗಮಣಿ ಕೆ. ತ.ರಾ.ಸು ಅವರ ಕಾದಂಬರಿ ಬಿಡುಗಡೆಯ ಬೇಡಿ: ಪ್ರಭಾವತಿ ಪಾತ. Int J Kannada Res 2024;10(4):48-50.