2024, Vol. 10 Issue 4, Part A
ಪ್ರಾಚೀನ ಭಾರತದಲ್ಲಿ ವಿಶ್ವಕರ್ಮರು
Author(s): ತ್ಯಾಗರಾಜ ಹೆಚ್.ವಿ., ಡಾ. ಪಿ ನಾಗರಾಜ
Abstract: ಚಾರಿತ್ರಿಕವಾಗಿ ವಿಶ್ವಕರ್ಮರ ಪರಂಪರೆಯನ್ನು ಗಮನಿಸುವುದಾದರೆ ಈಗಾಗಲೇ ಗುರ್ತಿಸಿರುವ ಹಾಗೆ ಇವರನ್ನು ಕಲೆಗಾರರು, ಶಿಲ್ಪಿಗಳು, ಲಿಪಿಕರು ಎಂದು ಗುರ್ತಿಸಲಾಗಿದೆ. ಈ ಕಲೆಗಾರರು, ಲಿಪಿಕಾರರು, ಶಿಲ್ಪಿಗಳು ಇಡೀ ಭಾರತದಾಧ್ಯಂತ ಕಂಡುಬರುತ್ತಾರೆ. ಇವರು ರಾಜಪ್ರಭುತ್ವದ ಸನಿಹದಲ್ಲಿದ್ದವರಾಗಿದ್ದರು ಎಂಬುದಕ್ಕೆ ಅನೇಕ ಉದಾಹರಣೆಗಳನ್ನು ಗುರ್ತಿಸಬಹುದು. ಕಲೆ ಮತ್ತು ವಾಸ್ತುಶಿಲ್ಪ, ಬಿಲ್ಲುಬಾಣ, ರಥಗಳು, ದೇವಾಲಯಗಳ ನಿರ್ಮಾಣ, ಶಾಸನಗಳ ಕೆತ್ತನೆ ಮೊದಲಾದವುಗಳು ಇವರ ಮುಖ್ಯ ಕಸುಬಾಗಿತ್ತು. ಇದನ್ನು ದೈವಕಾರ್ಯವೆಂತಲೂ ಇವರು ಭಾವಿಸಿಕೊಂಡಿದ್ದರು. ಇದು ಅಂದಿನ ಕಾಲಘಟ್ಟದ ಆಯಾ ರಾಜಪ್ರಭುತ್ವದ ಹೆಗ್ಗುರುತುಗಳೂ ಸಹ ಆಗಿದ್ದವು. ಈ ಹಿನ್ನೆಲೆಯಲ್ಲಿ ಪ್ರಾಚೀನ ಭಾರತದ ಸಂದರ್ಭದಲ್ಲಿ ಮೌರ್ಯ, ಮಗದ ಕಾಲಘಟ್ಟದಿಂದ ಹಿಡಿದು ಕರ್ನಾಟಕದ ಅರಸು ಮನೆತನವಾದ ವಿಜಯನಗರ ಸಾಮ್ರಾಜ್ಯದ ಕಾಲಘಟ್ಟದವರೆವಿಗೂ ಇವರ ಪರಂಪರೆಯ ಹರಹನ್ನು ಕಾಣಬಹುದು. ಪ್ರಸ್ತುತ ಲೇಖನದಲ್ಲಿ ಪ್ರಾಚೀನ ಭಾರತದ ಸಂದರ್ಭದಲ್ಲಿ ವಿಶ್ವಕರ್ಮರು ಹೇಗೆ ತಮ್ಮ ಹೆಜ್ಜೆಗುರುತುಗಳನ್ನು ಸ್ಥಾಪಿಸಿದ್ದಾರೆ ಎಂಬುದನ್ನು ಸಂಪ್ಷಿಪ್ತವಾಗಿ ವಿವರಿಸಲಾಗಿದೆ.
Pages: 44-47 | 43 Views 17 Downloads