2024, Vol. 10 Issue 4, Part A
ಹತ್ತನೇಯ ತರಗತಿಯ ವಿದ್ಯಾಥಿ೯ಗಳಿಗೆ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳ ನಡುವಿನ ಭಿನ್ನತೆಯನ್ನು ಗುರುತಿಸುವಲ್ಲಿ ಸಮಸ್ಯೆ
Author(s): ಕುಮಾರಿ ಸಂಗೀತಾ ಬೆಳಾವತಿ, ಡಾ.ರಾಘವೇಂದ್ರ ವಿ ಮಾಡಳ್ಳಿ
Abstract: ಕ್ರಿಯಾ ಸಂಶೋಧನೆ ಪ್ರಾಯೋಗಿಕವಾಗಿ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಸಹಾಯಕವಾಗಿದೆ. ಈ ಸಂಶೋಧನೆಯ ಮೂಲಕ ಮಕ್ಕಳ ಸಮಸ್ಯೆ ಗುರುತಿಸಿ ಪರಿಹಾರ ಕಂಡುಕೊಳ್ಳಬಹುದು. ಆ ನಿಟ್ಟಿನಲ್ಲಿ ಇಂದಿನ ಪ್ರೌಢಶಾಲಾ ಹಂತದ ಮಕ್ಕಳಿಗೆ ಬ್ಯಾಂಕಿನ ವ್ಯವಹಾರಗಳ ಕುರಿತು ಪೂರ್ವ ಪರೀಕ್ಷೆಯನ್ನು ನಡೆಸಲಾಯಿತು. ಅದರಲ್ಲಿ ಕೆಲವೊಂದು ಗೊಂದಲಗಳನ್ನು ಗುರುತಿಸಲಾಯಿತು. ಅದರಲ್ಲಿ ಪ್ರಮುಖವಾಗಿರುವುದು ಮಕ್ಕಳಿಗೆ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳ ನಡುವಿನ ವ್ಯತ್ಯಾಸ ತಿಳಿಯುವಲ್ಲಿ ಗೊಂದಲವಿರುವುದು. ಅದರ ಗೊಂದಲಕ್ಕೆ ಇರುವ ಕಾರಣಗಳನ್ನು ತಿಳಿದು ಅದನ್ನು ಪರಿಹರಿಸಲು ಚಟುವಟಿಕೆಗಳ ಮೂಲಕ ಪರಿಹಾರ ಬೋಧನೆಯನ್ನು ಕೈಗೊಂಡು ನಂತರ ಸಾಫಲ್ಯ ಪರೀಕ್ಷೆಯನ್ನು ಕೈಗೊಳ್ಳಲಾಯಿತು, ಆಗ ಗೊಂದಲಕ್ಕೆ ಒಳಗಾದ 18 ವಿದ್ಯಾರ್ಥಿಗಳ ಗೊಂದಲ ಪರಿಹಾರವಾಗಿ ಅವರು ಉತ್ತಮ ಅಂಕ ಪಡೆದಿರುವುದು ತಿಳಿದು ಬಂತು.
Pages: 22-29 | 33 Views 23 Downloads
How to cite this article:
ಕುಮಾರಿ ಸಂಗೀತಾ ಬೆಳಾವತಿ, ಡಾ.ರಾಘವೇಂದ್ರ ವಿ ಮಾಡಳ್ಳಿ. ಹತ್ತನೇಯ ತರಗತಿಯ ವಿದ್ಯಾಥಿ೯ಗಳಿಗೆ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳ ನಡುವಿನ ಭಿನ್ನತೆಯನ್ನು ಗುರುತಿಸುವಲ್ಲಿ ಸಮಸ್ಯೆ. Int J Kannada Res 2024;10(4):22-29.