2024, Vol. 10 Issue 4, Part A
ದಲಿತ ಮಹಿಳಾ ಕಾವ್ಯದಲ್ಲಿ ಸ್ತ್ರೀ ಶೋಷಣೆಯ ನೆಲೆಗಳು
Author(s): ಡಾ. ಕುಮಾರ ಇಂದ್ರೆಬೆಟ್ಟ
Abstract: ಕನ್ನಡದ ದಲಿತ ಸಾಹಿತ್ಯವು ಈ ಹಿಂದಿನ ಸಾಹಿತ್ಯ ಪರಂಪರೆಗಳಿಂತ ತೀರ ಭಿನ್ನವಾದ ಸಾಹಿತ್ಯಭಿವ್ಯಕ್ತಿಯಾಗಿದೆ.ಕಾರಣ ಅದರ ವಸ್ತು, ಸ್ವರೂಪ ಮತ್ತು ಧೋರಣೆಗಳಿಂದ.ಅಂದರೆ, ಶತಮಾನಗಳಿಂದ ಹಕ್ಕು ಮತ್ತು ಬಾಧ್ಯತೆಗಳನ್ನು ಕಳೆದುಕೊಂಡ ದಲಿತರು ನಿರಂತರ ಶೋಷಣೆಗೆ ಗುರಿಯಾಗಿದ್ದರು.ಹೀಗೆ ಶೋಷಣೆಗೆ ಗುರಿಯಾದ ಸಮುದಾಯಗಳು ಅಂಬೇಡ್ಕರ್ ಚಿಂತನೆಗಳ ಪ್ರಭಾವದಿಂದ ಎಚ್ಚರಗೊಂಡು ತಮಗಾಗುತ್ತಿರುವ ಅಸಮಾನತೆ, ಶೋಷಣೆಯನ್ನು ತೀಕ್ಷ್ಣವಾಗಿ ತಮ್ಮ ಸಾಹಿತ್ಯ ಕೃತಿಗಳಲ್ಲಿ ಅನಾವರಣಗೊಳಿಸಿದರು.ಹಾಗೆಯೇ, ಆ ಶೋಷಣೆಯನ್ನು ಸಾಹಿತ್ಯದ ಮೂಲಕ ಪ್ರತಿಭಟನೆಯು ಸಹ ಮೊಳಗತೊಡಗಿತು.ಇಂದು ಪ್ರಜ್ಞೆ ಕಳೆದುಕೊಂಡಿದ್ದ ಸಮುದಾಯವೊಂದು ಎಚ್ಚೆತ್ತು ಬೀದಿಗಿಳಿದು ತಮ್ಮ ನೋವು, ಆಕ್ರೋಶಗಳನ್ನು ಸಮಾಜಕ್ಕೆ ಪರಿಚಯುಸುವುದರ ಜೊತೆಗೆ ಪ್ರಭುತ್ವಕ್ಕೂ ಬಿಸಿಮುಟ್ಟಸತೊಡಗಿದರು.ಈ ಹಿನ್ನೆಲೆಯಲ್ಲಿಯೇ ದಲಿತ ಮಹಿಳೆಯರು ಸಹ ಇದರ ಭಾಗವಾಗತೊಡಗಿದರು.ದಲಿತ ಮಹಿಳೆಯರೂ ಸಹ ತಮ್ಮ ಸಾಹಿತ್ಯ ಕೃತಿಗಳ ಮೂಲಕ ತಮಗಾದ ಅನ್ಯಾಯದ ವಿರುದ್ಧ, ಜಾತಿಯ ಅಸಮಾನತೆ, ಲೈಂಗಿಕ ದೌರ್ಜನ್ಯ, ಲಿಂಗ ಅಸಮಾನತೆ, ದೇವದಾಸಿ ಪದ್ಧತಿ ಮೊದಲಾದವುಗಳಿಂದ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿದ್ದರು. ದಲಿತ ಮಹಿಳೆಯರು ತಾವು ಕಳೆದುಕೊಂಡಿದ್ದ ಅಸ್ಮಿತೆ, ಅಸ್ತಿತ್ವವನ್ನು ಕಾವ್ಯದ ಮುಖೇನ ಹುಡುಕುವ ಪ್ರಯತ್ನವನ್ನು ಮಾಡಿದ್ದಾರೆ. ಪ್ರಸ್ತುತ ದಲಿತ ಮಹಿಳೆಯರು ನಮ್ಮ ಸಾಮಾಜಿಕ ವ್ಯವಸ್ಥೆಯು ಹತ್ತಿಕ್ಕಲ್ಪಟ್ಟ ಹಕ್ಕುಗಳನ್ನು ಶೋಧಿಸುತ್ತಾ ತಮಗಾದ ಅನ್ಯಾಯವನ್ನು ಸಮಾಜಕ್ಕೆ ಎತ್ತಿತೋರಿಸಿ ಅಂತಹ ಅನ್ಯಾಯದ ವಿರುದ್ಧ ಸಾಮುದಾಯಿಕವಾಗಿ ಪ್ರತಿರೋಧ ವ್ಯಕ್ತಪಡಿಸುವ ನೆಲೆಯಲ್ಲಿ ಹೊಸ ತಲೆಮಾರಿನ ದಲಿತ ಕವಯಿತ್ರಿಯರ ಕಾವ್ಯದಲ್ಲಿ ವ್ಯಕ್ತವಾಗಿದೆ.
Pages: 13-17 | 54 Views 29 Downloads
How to cite this article:
ಡಾ. ಕುಮಾರ ಇಂದ್ರೆಬೆಟ್ಟ. ದಲಿತ ಮಹಿಳಾ ಕಾವ್ಯದಲ್ಲಿ ಸ್ತ್ರೀ ಶೋಷಣೆಯ ನೆಲೆಗಳು. Int J Kannada Res 2024;10(4):13-17.