Abstract: ೧೨ನೇ ಶತಮಾನದ ವಚನ ಸಾಹಿತ್ಯ/ ಚಳುವಳಿ ಎಂಬುದು ಮನುಕುಲ ಒಂದೊಮ್ಮೆ ಹಿಂದೆತಿರುಗಿ ನೋಡುವಂತೆ ಮಾಡಿದ ಮಹಾನ್ ಕ್ರಾಂತಿ ಎಂದೇ ಕರೆಯಬೇಕಾಗಿದೆ. ಮನುಕುಲದಲ್ಲಿನ ಕುಂದುಕೊರೆತೆಗಳಾದ ಅಂದಿನ ಅನೇಕ ಅಸಮಾನತೆಗಳು, ಧರ್ಮಪರ ಚಿಂತನೇಗಳು, ಕುಲಬೇಧಗಳಿಲ್ಲದ, ಲಿಂಗಬೇಧಗಳಿಲ್ಲದ ಮುನ್ನಡೆಗೆ ವಚನಗಳು ಸಾಕ್ಷಿಯಾದ ರೀತಿ ಇವತ್ತಿಗೂ ಪ್ರಸ್ತುತವಾದ ವೈಚಾರಿಕತೆಯ ಮಹಾ ಮುನ್ನಡೆಯಾಗಿದೆ ಕನ್ನಡ ಸಾಹಿತ್ಯ ಚರಿತ್ರೆ ಗ್ರಹಿಸಬೇಕಾಗಿದೆ.