Contact: +91-9711224068

Kannada Journal

International Journal of Kannada Research

  • Printed Journal
  • Indexed Journal
  • Refereed Journal
  • Peer Reviewed Journal

ಪ್ರವಾಸೋದ್ಯಮದಲ್ಲಿ ಮುದ್ರಣ ಮಾಧ್ಯಮದ ಪಾತ್ರ

2024, Vol. 10 Issue 3, Part A
ಪ್ರವಾಸೋದ್ಯಮದಲ್ಲಿ ಮುದ್ರಣ ಮಾಧ್ಯಮದ ಪಾತ್ರ
Author(s): ವಿವೇಕ್ ಗೌಡ ಕೆ, ಡಾ. ಎನ್ ಮಮತ
Abstract: ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮಗಳ ನಡುವೆ ಇಂದು ತನ್ನದೆ ಪ್ರಾಬಲ್ಯವನ್ನು ಮುದ್ರಣ ಮಾಧ್ಯಮ ಹೊಂದಿದೆ. ಮುದ್ರಣ ಮಾಧ್ಯಮ ಮತ್ತು ಪ್ರವಾಸೋದ್ಯಮವು ಎರಡು ವಿಭಿನ್ನ ಆದರೆ ಪರಸ್ಪರ ಸಂಬಂಧ ಹೊಂದಿರುವ ಅಂಶಗಳಾಗಿವೆ, ಅದು ಪರಸ್ಪರ ಗಮನಾರ್ಹ ಪರಿಣಾಮ ಬೀರುತ್ತದೆ. ಅವು ಒಂದಕ್ಕೊಂದು ಹೇಗೆ ಸಂಬಂಧಿಸಿವೆ ಎಂಬುದನ್ನು ತಿಳಿಯೋಣ. ಮುದ್ರಣ ಮಾಧ್ಯಮಗಳಲ್ಲಿ ಪ್ರವಾಸೋದ್ಯಮಗಳ ಅನುಭವಗಳನ್ನು ಮುದ್ರಿಸಿ ಪ್ರಕಟಿಸುವ ಲೇಖನಗಳು ಅಥವಾ ಪ್ರವಾಸೋದ್ಯಮ ಪ್ರಕಟಣೆಗಳು ಎಂದು ಹೇಳಬಹುದು. ಪ್ರವಾಸೋದ್ಯಮ ಪ್ರಕಟಣೆಗಳು ವಿಶೇಷವಾಗಿ ಪ್ರಯಾಣಿಕರು ಹಾಗೂ ಪ್ರವಾಸಿಗಳು ಅನುಭವಿಸುವ ತಮ್ಮ ಪ್ರಯಾಣ ಅಥವಾ ಯಾತ್ರೆಗಳ ವಿವರಗಳನ್ನು ಮುದ್ರಿಸಿ ಹಂಚುವುದಕ್ಕೆ ಬಳಸಲ್ಪಡುತ್ತೇವೆ. ಇವು ಪ್ರಯಾಣಿಕರ ಪ್ರಯಾಣ, ದೇಶ, ನಗರ, ಸ್ಥಳ, ಜನರು, ಸಂಪ್ರದಾಯಗಳು, ರೀತಿನೀತಿಗಳು ಹಾಗೂ ಅನುಭವಗಳ ಬಗ್ಗೆ ವಿವರಣೆ ನೀಡುತ್ತವೆ. ಪ್ರವಾಸೋದ್ಯಮ ಪ್ರಕಟಣೆಗಳನ್ನು ಸಾಮಾನ್ಯವಾಗಿ ಪತ್ರಿಕೆಗಳಲ್ಲಿ, ಮಾಸಪತ್ರಿಕೆಗಳಲ್ಲಿ ಅಥವಾ ವೃತ್ತಪತ್ರಿಕೆಗಳಲ್ಲಿ ಪ್ರಕಟಿಸಲಾಗುತ್ತದೆ. ಪ್ರವಾಸೋದ್ಯಮದ ಮೂಲ ಉದ್ದೇಶವು ಅನುಭವಿಸಿದ ಸ್ಥಳದ ವಿಚಾರಗಳು, ವಿಷಯಗಳು, ಮಾಹಿತಿಗಳನ್ನು ಸಂaಪೂರ್ಣವಾಗಿ ತಿಳಿಸುವುದಾಗಿರುತ್ತದೆ. ಮುಂದಿನ ದಿನಗಳಲ್ಲಿ ಬೇರೆಯವರು ಆ ಸಥಳಗಳಿಗೆ ಹೋಗಲು ಅನುಕೂಲವಾಗುಂತೆ ಮಾಹಿತಿಗಳನ್ನು ಒದಗಿಸುವುದು ಇದಾಗಿರುತ್ತದೆ. ಮುದ್ರಣ ಮಾಧ್ಯಮದಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಜನರಿಗೆ ಪ್ರವಾಸಿಗರಿಗೆ ತಿಳಿಸಲು ಮುದ್ರಿಸಿ ಪ್ರಕಟಿಸುವುದು ಒಂದು ಪದ್ಧತಿಯಾಗಿದೆ. ಮುದ್ರಣ ಮಾಧ್ಯಮವು ಯಾವುದೋ ವಸ್ತುವನ್ನು ಅಥವಾ ಸಂದೇಶವನ್ನು ಮುದ್ರಿಸಲು ಬಳಸುವ ಮಾಧ್ಯಮವಾಗಿದೆ. ಸರಳವಾಗಿ ಹೇಳುವುದಾದರೆ, ಇದು ಸಮಾಚಾರ, ವಿಜ್ಞಾಪನ, ಪ್ರಚಾರ ಹಾಗೂ ಪ್ರಕಟಣೆಗಳನ್ನು ಮುದ್ರಿಸಲು ಬಳಸಲ್ಪಡುವ ಸಾಧನವಾಗಿದೆ
Pages: 37-40  |  112 Views  37 Downloads


International Journal of Kannada Research
How to cite this article:
ವಿವೇಕ್ ಗೌಡ ಕೆ, ಡಾ. ಎನ್ ಮಮತ. ಪ್ರವಾಸೋದ್ಯಮದಲ್ಲಿ ಮುದ್ರಣ ಮಾಧ್ಯಮದ ಪಾತ್ರ. Int J Kannada Res 2024;10(3):37-40.
Related Journal Subscription
International Journal of Kannada Research

International Journal of Kannada Research

Call for book chapter
Journals List Click Here Research Journals Research Journals
International Journal of Kannada Research