2024, Vol. 10 Issue 2, Part B
‘ರಸಗಂಗಾಧರ’ ಕೃತಿಯ ಪ್ರೇಮದ ದೃಷ್ಟಿ ಮತ್ತು ಸೃಷ್ಟಿಯ ಕೋನಗಳು
Author(s): Dr. Raveendra Katti
Abstract: ಸಾಹಿತ್ಯ ಲೋಕದಲ್ಲಿ ಈಗಾಗಲೇ ಪ್ರೊ.ವಿಕ್ರಮ ವಿಸಾಜಿರವರು- ತಮಾಷಾ, ಗೂಡು ಕಟ್ಟುವ ಚಿತ್ರ, ವಿಕ್ರಮ ವಿಸಾಜಿ ಕಥೆಗಳು, ಬಿಸಿಲ ಕಾಡಿನ ಹಣ್ಣು ಬೆಳಗಿನ ಮುಖ, ನಾದಗಳು ನುಡಿಯಾಗಲೇ, ಪಠ್ಯದ ಭವಾವಳಿ, ರಸಗಂಗಾಧರ, ರಕ್ತ ವಿಲಾಪ, ಕಂಬಾರರ ನಾಟಕಗಳು, ಮತ್ತೆ ಬಂತು ಶ್ರಾವಣ, ಗ್ರೀಕ್ ಹೊಸ ಕಾವ್ಯ, ಇಂದ್ರಸಭಾ, ಸಿಮೋನ್ ದ ಬೋವಾ- ಈ ರೀತಿಯ ಅನನ್ಯ ಕೃತಿಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಇವರ ‘ರಸಗಂಗಾಧರ’ ಮತ್ತು ರಕ್ತವಿಲಾಪ ಎಂಬೆರಡು ಕೃತಿಗಳು ನಾಟಕ ಸಾಹಿತ್ಯಕ್ಕೆ ಸಂಬಂಧಿಸಿವೆ. ಇವರು ‘ರಸಗಂಗಾಧರ’ ಕೃತಿಯ ಮೂಲಕ ನಾಟಕ ಕ್ಷೇತ್ರವನ್ನು ಪ್ರವೇಶಿಸಿದವರು. ಈ ಕೃತಿಯ ಮೂಲಕ ಸಾಹಿತ್ಯಲೋಕಕ್ಕೆ ಪ್ರೇಮವೊಂದರ ಮಾದರಿಯನ್ನು ಪರಿಚಯಿಸುವ ಅವರ ಉತ್ಸಾಹ, ಹುಮ್ಮಸ್ಸು, ರಚನೆಗಳಲ್ಲಿ ಕಂಡುಬರುವ ವಾಕ್ ಚಾತುರ್ಯಗಳು ರಮ್ಯವಾಗಿಯೇ ಗುರುತಿಸಿಕೊಳ್ಳುತ್ತವೆ. ಇತಿಹಾಸದ ಕಥನವೊಂದರ ಭಾಗವಾಗಿ ನಿರೂಪಿತಗೊಳ್ಳುವ ಪ್ರೇಮವು- ಈ ಲೋಕದ ಸದ್ಯದ ಅನಿವಾರ್ಯತೆ ಮತ್ತು ಅಗತ್ಯತೆಗಳನ್ನು ಕುರಿತು ವಿವೇಚಿಸುತ್ತದೆ. ಈ ಲೋಕದ ಹಿಂಸೆಯ ಮಾದರಿಗಳು ಪ್ರೇಮವನ್ನು ತಿಕ್ಕುವ, ಹತ್ತಿಕ್ಕುವ ಕಾಲವೊಂದರ ಹಲವು ಪ್ರಯತ್ನಗಳನ್ನು ಈ ಕೃತಿಯಲ್ಲಿ ಅಡಕಗೊಳಿಸಲಾಗಿದೆ.
Pages: 104-106 | 201 Views 65 Downloads