ಕೀರ್ತನೆಗಳಲ್ಲಿ ಮುಕ್ತಿ ಮಾರ್ಗದ ಕುರಿತು ತಾತ್ವಿಕ ಚಿಂತನೆಗಳು
2024, Vol. 10 Issue 2, Part A
ಕೀರ್ತನೆಗಳಲ್ಲಿ ಮುಕ್ತಿ ಮಾರ್ಗದ ಕುರಿತು ತಾತ್ವಿಕ ಚಿಂತನೆಗಳು
Author(s): ವೆಂಕಮ್ಮ ಸತೀಶ್ ಅಂಬಿಗೇರ್
Abstract: ಪ್ರಸ್ತುತ ಸಂಶೋಧನ ಲೇಖನವು 15 ಮತ್ತು 16ನೆಯ ಶತಮಾನದ ಹರಿದಾಸರ ಕೀರ್ತನೆಗಳಲ್ಲಿ ಭಕ್ತಿಯಿಂದ ಮುಕ್ತಿಯೆಡೆಗೆ ಸಾಗುವ ಮಾರ್ಗಗಳನ್ನು ತಿಳಿಸುತ್ತದೆ. ಜ್ಞಾನ ಮತ್ತು ಭಕ್ತಿಯ ಮೂಲಕ ಮುಕ್ತಿಯನ್ನು ಕಾಣಲು ಬಯಸುವರು ವಿಷ್ಣುವನ್ನು ತಮ್ಮ ಆರಾಧ್ಯದೈವವನ್ನಾಗಿಸಿಕೊಂಡು ಆಧ್ಯಾತ್ಮಿಕ, ಧಾರ್ಮಿಕ ಮತ್ತು ಸಾಂಸ್ಕøತಿಕ ಸುಧಾರಣೆಗಾಗಿ ಉದ್ಭವಿಸಿದ ಸಾಹಿತ್ಯ ಪ್ರಕಾರವೇ ದಾಸ ಸಾಹಿತ್ಯ ಎನ್ನುವ ತಾತ್ವಿಕ ಚಿಂತನೆಗಳನ್ನು ಬಿತ್ತರಿಸುತ್ತದೆ. ಹರಿದಾಸರು ತಮ್ಮ ಜೀವನದಲ್ಲಿ ಆಸ್ತಿ-ಪಾಸ್ತಿಗಳನ್ನು ತೊರೆದು ಮುಕ್ತಿಗಾಗಿ ಹಾತೊರೆಯುತ್ತಿರುವುದನ್ನು ಚರ್ಚಿಸಲಾಗಿದೆ. ವಿಶ್ವ ಸಾಹಿತ್ಯಕ್ಕೆ ಹರಿದಾಸ ಸಾಹಿತ್ಯದ ಕೊಡುಗೆ ಅಪಾರ. ಹರಿದಾಸ ಸಾಹಿತ್ಯ ಎಂಬುದು ಹರಿ ಭಕ್ತರಿಂದ ರಚಿತವಾದ ಸಾಹಿತ್ಯ. ಸಾಹಿತ್ಯಕ್ಕೆ ಮೂಲ ಪ್ರೇರಣೆಯೇ ಭಕ್ತಿ ಎನ್ನುವುದನ್ನು ಸಾದರಪಡಿಸಲಾಗಿದೆ.
ವೆಂಕಮ್ಮ ಸತೀಶ್ ಅಂಬಿಗೇರ್. ಕೀರ್ತನೆಗಳಲ್ಲಿ ಮುಕ್ತಿ ಮಾರ್ಗದ ಕುರಿತು ತಾತ್ವಿಕ ಚಿಂತನೆಗಳು. Int J Kannada Res 2024;10(2):01-03. DOI: 10.22271/24545813.2024.v10.i2a.957