2023, Vol. 9 Issue 4, Part C
ಧಾರವಾಡÀ ಜಿಲ್ಲೆಯ ಅವಿಭಕ್ತ ಕುಟುಂಬ ಹಾಗೂ ವಿಭಕ್ತ ಕುಟುಂಬದ ಸದಸ್ಯರು ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೊಂದಿರುವ ಸಮಸ್ಯೆಗಳ ಕುರಿತು: ಒಂದು ಅಧ್ಯಯನ.
Author(s): ಶ್ರೀಮತಿ ಗಾಯತ್ರಿ ಎಸ್. ಅಣ್ಣಿಗೇರಿ
Abstract: ಅವಿಭಕ್ತ ಕುಟುಂಬ ಅಥವಾ ಜಂಟಿಕುಟುಂಬವು ಭಾರತದ ಸಾಮಾಜಿಕ ವ್ಯವಸ್ಥೆಯ ಅವಿಭಜನೀಯವಾದ ಅಂಗವಾಗಿದೆ. ಭಾರತೀಯ ಸಾಮಾಜಿಕ ವಿಕಾಸದಲ್ಲಿ ಕುಟುಂಬವೆಂದರೆ ಜಂಟಿ ಕುಟುಂಬವೇ ಅಗಿದೆ. ಅವಿಭಕ್ತ ಕುಟುಂಬವು ಅಸ್ತಿತ್ವಕ್ಕೆ ಬಂದಿರುವ ಕಾಲ ಘಟ್ಟವನ್ನು ನಿಖರವಾಗಿ ಗುರುತಿಸುವುದು ಕಷ್ಟ. ಕೇಂದ್ರ ಕುಟುಂಬಕ್ಕೆ ವಿರುದ್ಧವಾಗಿ ಇಲ್ಲಿ ತಂದೆ-ತಾಯಿ, ಮಕ್ಕಳು, ಮೊಮ್ಮಕ್ಕಳು ಮತ್ತು ಮರಿ-ಮೊಮ್ಮಕ್ಕಳು ಹೀಗೆ 3/4 ಕೆಲವೊಮ್ಮೆ 5 ತಲೆಮರಿಗೆ ಸೇರಿದ ವ್ಯಕ್ತಿಗಳು ಒಂದೇ ಕಡೆ ವಾಸಿಸುವರು. ಅವಿಭಕ್ತ ಕುಟುಂಬವೆಂಬ ಅಧಾರಶಿಲೆಯ ಮೇಲೆ ಹಿಂದೂ ಮೌಲ್ಯಗಳು ಮತ್ತು ಮನೋಭಾವನೆಗಳು ರೂಪುಗೊಂಡಿವೆ ಎಂದು ಹೇಳುವುದೂ ಇದೆ. ಸಾಂಪ್ರದಾಯಿಕ ಹಿಂದೂ ಸಂಸ್ಕøತಿಯೊಂದಿಗೆ ಸಮರಸಗೊಂಡಿರುವ ಅವಿಭಕ್ತ ಕುಟುಂಬವು ದೇಶದ ಎಲ್ಲಾ ಮೂಲೆ-ಮೂಲೆಗಳಲ್ಲೂ ಇಂದಿಗೂ ಅಸ್ತಿತ್ವದಲ್ಲಿದೆ. ಈ ಕುಟುಂಬ ವ್ಯವಸ್ಥೆಗೆ ತನ್ನದೇ ಆದ ಸುದೀರ್ಘವಾದ ಇತಿಹಾಸವೂ ಇದೆ. ಒಟ್ಟಿನಲ್ಲಿ ಕನಿಷ್ಟ 3 ಅದಕ್ಕೂ ಹೆಚ್ಚಿನ ತಲೆಮಾರುಗಳಿಗೆ ಸೇರಿದ ರಕ್ತ ಸಂಬಂಧಿಗಳು ಒಬ್ಬ ವ್ಯಕ್ತಿಯ / ಪುರುಷ / ಸ್ತ್ರೀ ನೇತೃತ್ವದಲ್ಲಿ ದುಡಿಯುತ್ತಾ ಒಂದೇ ನಿವಾಸದಲ್ಲಿ ಒಂದೇ ಕುಟುಂಬದವರಂತೆ ಒಟ್ಟಿಗೆ ನೆಲೆಸಿರುವುದನ್ನು ಅವಿಭಕ್ತ ಕುಟುಂಬ ಎಂದು ಕರೆಯುವರು. ವಿಭಕ್ತ ಕುಟುಂಬ, ಅವಿಭಕ್ತ ಜುಟುಂಬದ ಹಾಗೇ 3/4 ತಲೆಮಾರಿನ ಸದಸ್ಯರನ್ನು ಒಳಗೊಂಡಿರುವುದಿಲ್ಲ, ಬದಲಾಗಿ ಕೇವಲ ಗಂಡ-ಹೆಂಡತಿ ಹಾಗೂ ಮಕ್ಕಳನ್ನೊಳಗೊಂಡ ಚಿಕ್ಕ ಗಾತ್ರದ ಕುಟುಂಬ. ಪ್ರಸ್ತುತ ಅಧ್ಯಯನಕ್ಕಾಗಿ ಧಾರವಾಡÀ ತಾಲೂಕಿನ 50 ಅವಿಭಕ್ತ ಹಾಗೂ 50 ವಿಭಕ್ತ ಕುಟುಂಬದ ಸದಸ್ಯರು ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿದುಕೊಳ್ಳಲು ಪ್ರಶ್ನಾವಳಿಗಳ ಮೂಲಕ ಸಮೀಕ್ಷಾ ವಿಧಾನವನ್ನು ಅನುಸರಿಸಿ ದತ್ತಾಂಶಗಳನ್ನು ಸಂಗ್ರಹಿಸಲಾಯಿತು.
Pages: 162-167 | 248 Views 92 Downloads
How to cite this article:
ಶ್ರೀಮತಿ ಗಾಯತ್ರಿ ಎಸ್. ಅಣ್ಣಿಗೇರಿ. ಧಾರವಾಡÀ ಜಿಲ್ಲೆಯ ಅವಿಭಕ್ತ ಕುಟುಂಬ ಹಾಗೂ ವಿಭಕ್ತ ಕುಟುಂಬದ ಸದಸ್ಯರು ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೊಂದಿರುವ ಸಮಸ್ಯೆಗಳ ಕುರಿತು: ಒಂದು ಅಧ್ಯಯನ.. Int J Kannada Res 2023;9(4):162-167.