Contact: +91-9711224068

Kannada Journal

International Journal of Kannada Research

  • Printed Journal
  • Indexed Journal
  • Refereed Journal
  • Peer Reviewed Journal

Impact Factor: RJIF 4.89

ದಕ್ಷಿಣ ಕನ್ನಡ ಜಿಲ್ಲೆಯ ನಲಿಕೆ ಸಮುದಾಯದ ಸಾಂಸ್ಕøತಿಕ ಆಚರಣೆಗಳು

2023, Vol. 9 Issue 3, Part B
ದಕ್ಷಿಣ ಕನ್ನಡ ಜಿಲ್ಲೆಯ ನಲಿಕೆ ಸಮುದಾಯದ ಸಾಂಸ್ಕøತಿಕ ಆಚರಣೆಗಳು
Author(s): ಧರ್ಮರಾಯ
Abstract: ತುಳುನಾಡಿನಂತಹ ಒಂದು ಸಣ್ಣ ಭೂ ಪ್ರದೇಶದಲ್ಲಿ ವಾಸಿಸುವ ಹಲವು ಜಾತಿ ಜನಾಂಗಗಳ ಪೈಕಿ ಒಂದಾಗಿರುವ ‘ನಲಿಕೆ’ ಯು ಒಂದು ಸಮುದಾಯ. ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ, ಮಂಗಳೂರು ಮತ್ತು ಬಟ್ವಾಂಳ ತಾಲ್ಲೂಕು, ಉಡುಪಿಯ ಕಾರ್ಕಳ, ಕುಂದಾಪುರ ಹಾಗೂ ಕೇರಳದ ಕಾಸರಗೋಡು ಭಾಗಗಳಲ್ಲಿ ಅಲ್ಲಲ್ಲಿ ಈ ಸಮುದಾಯದ ಜನರು ಕಂಡು ಬರುತ್ತಾರೆ. ದೈವಾರಾಧನೆಯೇ ಪ್ರಮುಖ ಆಚರಣೆಯಾಗಿ ಬೆಳೆದು ಬಂದಿರುವ ತುಳುನಾಡಿನಲ್ಲಿ ನಲಿಕೆಯವರಿಗೆ ತಮ್ಮದೇ ಆದ ಪ್ರಾಶಸ್ತ್ಯವಿದೆ. ಭೂತಾರಾಧನೆ ತುಳುನಾಡಿನ ಅತ್ಯಂತ ಪ್ರಾಚೀನ ಆರಾಧನಾಕಲೆ, ಈ ಕಲೆಗೆ ಸಂಬಂಧಿಸಿದಂತೆ ಊರಿನ ಗೌಡ, ಬುದ್ದಿವಂತರಿಗೆ ಹಾಗೂ ಪೂಜಾರಿಗಳಿಗೆ ಇರುವಷ್ಟೇ ಪ್ರಾಮುಖ್ಯತೆ, ಗೌರವ ಕೋಲ(ನೇಮ) ಕಟ್ಟುವ ‘ನಲಿಕೆ’ಯವರಿಗೂ ಇರುತ್ತದೆ. ದೈವಗಳ ಕೋಲ (ನೇಮ) ನಡೆಯುವ ಸಂದರ್ಭದಲ್ಲಿ ನಿರ್ದೇಶಿಸಲ್ಪಟ್ಟ ನಲಿಕೆಯವರು ವೇಷ ಹಾಕಿ ಕುಣಿಯುತ್ತಾರೆ. ದೈವಿಕವಾದ ಸಂದರ್ಭಗಳನ್ನು ಸೃಷ್ಟಿಸುತ್ತಾರೆ. ವೇಷ ಹಾಕಿದ ಮೇಲೆ ಯಾವ ದೈವದ ನೇಮ ಕಟ್ಟಲಾಗಿರುತ್ತದೆಯೋ ಆ ದೈವವು ವೇಷ ಹಾಕಿರುವ ನರ್ತಕನ ಮೇಲೆ ಆಹ್ವಾಹನೆಯಾಗುತ್ತದೆ ಎಂಬುದು ತುಳುನಾಡಿನ ಜನರ ನಂಬಿಕೆಯಾಗಿದೆ. ನಲಿಕೆ ಸಮುದಾಯದವರ ಸಾಮಾಜಿಕ ಮತ್ತು ಸಾಂಸ್ಕøತಿಕ ಆಚರಣೆಗಳನ್ನು ಮುಖ್ಯವಾಗಿ ಮೂರು ವಿಭಾಗಗಳಾಗಿ ವಿಂಗಡಿಸಬಹುದು. 1. ಜೀವನಾವರ್ತನ ಆಚರಣೆಗಳು 2. ಹಬ್ಬಗಳು 3. ಕುಣಿತಗಳು. ಪ್ರಸ್ತುತ ಜೀವನಾವರ್ತನ ಆಚರಣೆಗಳ ಕುರಿತು ಈ ಲೇಖನದಲ್ಲಿ ಚರ್ಚಿಸಲಾಗಿದೆ.
Pages: 84-88  |  38 Views  27 Downloads
How to cite this article:
ಧರ್ಮರಾಯ. ದಕ್ಷಿಣ ಕನ್ನಡ ಜಿಲ್ಲೆಯ ನಲಿಕೆ ಸಮುದಾಯದ ಸಾಂಸ್ಕøತಿಕ ಆಚರಣೆಗಳು. Int J Kannada Res 2023;9(3):84-88.
Call for book chapter
Journals List Click Here Research Journals Research Journals
International Journal of Kannada Research