Contact: +91-9711224068

Kannada Journal

International Journal of Kannada Research

  • Printed Journal
  • Indexed Journal
  • Refereed Journal
  • Peer Reviewed Journal

Impact Factor: RJIF 4.89

ಅನುವಾದಿತ ಆತ್ಮಕಥೆಗಳಲ್ಲಿ ಸಾಮಾಜಿಕ ಸಂವೇದನೆಗಳ ಭಿತ್ತಿಚಿತ್ರಗಳು

2023, Vol. 9 Issue 2, Part B
ಅನುವಾದಿತ ಆತ್ಮಕಥೆಗಳಲ್ಲಿ ಸಾಮಾಜಿಕ ಸಂವೇದನೆಗಳ ಭಿತ್ತಿಚಿತ್ರಗಳು
Author(s): ಡಾ. ಸತೀಶ್ ಎಪಿ, ಡಾ. ರಾಜೇಶ್ ಬೆಜ್ಜಂಗಳ
Abstract: ಪೀಠಿಕೆ: ಈಗ ಕೆಲವು ಮಹಿಳೆಯರ ಅನುವಾದಿತ ಆತ್ಮಕಥೆಗಳು ಬಂದಿವೆಯಾದರೂ ಲೇಖಕಿಯರು ಆತ್ಮಕಥೆಗಳನ್ನು ಬರೆಯುವುದೇ ಅಪರೂಪ. ಕನ್ನಡದಲ್ಲಂತೂ ಬಹಳ ಬಹಳ ಕಡಿಮೆ. ಇದಕ್ಕೆ ಮುಖ್ಯ ಕಾರಣ ತಮ್ಮ ಬದುಕಿನ ಕೆಲವು ಪುಟಗಳನ್ನು ಜಗಜ್ಜಾಹೀರುಗೊಳಿಸಲು ಮಹಿಳೆಯರು ಇಷ್ಟಪಡದಿರುವುದು ಎನ್ನುವುದು ಸ್ಪಷ್ಟ. ಮಹಿಳೆಯರಿಗೆ ಅಭಿನಂದನಾ ಗ್ರಂಥಗಳೂ ಕಡಿಮೆ. ಲೇಖಕಿಯರ ವ್ಯಕ್ತಿಪರಿಚಯದ ಲೇಖನಗಳೂ ಹಿಂದೆ ಕಡಿಮೆಯಾಗಿದ್ದುವು. ಈಗ ಬಹಳಷ್ಟು ಬರುತ್ತಿವೆ.
ಉದ್ದೇಶ ಮತ್ತು ವ್ಯಾಪ್ತಿ: ಆತ್ಮಕತೆ ಬರೆಯುವುದು ಯಾಕೆ? ಓದುವುದು ಯಾಕೆ? ಬರೆದದ್ದನ್ನು ಬೇರೆ ಭಾಷೆಗಳಿಗೆ ಅನುವಾದಿಸುವುದೇಕೆ? ಎಂಬ ಪ್ರಶ್ನೆಗಳು ಏಳುವುದು ಸಹಜ. ಇನ್ನೂ ಹಲವು ನೆಲೆಯ ಪ್ರಶ್ನೆಗಳು ಏಳಬಹುದು. ಆತ್ಮಕಥೆಗಳಲ್ಲಿನ ಭಿನ್ನತೆಯ ಕಾರಣಗಳು ಏನು ಎಂಬುದರ ಹುಡುಕಾಟವೂ ಮುಖ್ಯವಾಗುತ್ತದೆ. ಸಾಮಾಜಿಕರಣ ಸ್ತ್ರೀ-ಪುರುಷರನ್ನು ರೂಪೀಕರಿಸುವುದಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇರೆ ಬೇಕಿಲ್ಲ. ಆತ್ಮಕತೆಯನ್ನು ಯಾವಾಗ ಬರೆಯಬೇಕು? ಎಂಬ ಪ್ರಶ್ನೆಯೂ ಆಗಾಗ ಏಳುವುದಿದೆ.
Findings and implications (ಫಲಿತಗಳು)
.ಮಹಿಳೆಯರ ಜೀವನಾನುಭವ ಪುರುಷರಿಗಿಂತ ಭಿನ್ನ ಮತ್ತು ವಿಶಿಷ್ಟವಾದುದು.
. ಶತಮಾನಗಳಿಂದಲೂ ತನ್ನ ಮೇಲೆ ಹೇರಲಾಗಿರುವ ಕಟ್ಟುನಿಟ್ಟು ಸಂಪ್ರದಾಯದ ಲಕ್ಷಣರೇಖೆಗಳನ್ನು ದಾಟಿ, ಹಲವಾರು ರೀತಿಯ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಿ ಹೋರಾಡುತ್ತಾ ಬಂದಿದ್ದಾಳೆ.
. ಹೋರಾಟದಲ್ಲಿ ಯಾರೂ ಕಲಿಸಲಾಗದ ಹೊಸ ಪಾಠಗಳನ್ನು ಆಕೆ ಕಲಿತಿದ್ದಾಳೆ. ತನ್ನತನವನ್ನು ಗುರುತಿಸಿಕೊಂಡು ಆತ್ಮವಿಶ್ವಾಸವನ್ನು ಬೆಳೆಸಿಕೊಂಡಿದ್ದಾಳೆ.
ಸಮಾರೋಪ: ಇವತ್ತಿನ ಸಂದರ್ಭದಲ್ಲಿ ಪುರುಷರ ಹಲವಾರು ಅನುಭವಗಳು ಮಹಿಳೆಯರದ್ದಾಗುವ ಸಾಧ್ಯತೆ ಇರುವುದಾದರೂ ಮಹಿಳೆಯರ ಹೆಚ್ಚಿನ ಅನುಭವಗಳು ಪುರುಷರದ್ದಾಗುವುದು ಸಾಧ್ಯವೇ ಇಲ್ಲ. ಸಾಮಾನ್ಯವಾಗಿ ಬದುಕಿನ ಉತ್ತರಾರ್ಧದಲ್ಲಿ ಆತ್ಮಕತೆ ಬರೆದವರೇ ಹೆಚ್ಚು. ಯಾವುದಕ್ಕೂ ಬದುಕು ಮತ್ತು ಮನಸ್ಸು ಪಕ್ವವಾದಾಗಲೇ, ಆತ್ಮಕತೆ ಹೆಚ್ಚು ಗಟ್ಟಿಯಾಗುತ್ತದೆ.
Pages: 116-121  |  169 Views  45 Downloads
How to cite this article:
ಡಾ. ಸತೀಶ್ ಎಪಿ, ಡಾ. ರಾಜೇಶ್ ಬೆಜ್ಜಂಗಳ. ಅನುವಾದಿತ ಆತ್ಮಕಥೆಗಳಲ್ಲಿ ಸಾಮಾಜಿಕ ಸಂವೇದನೆಗಳ ಭಿತ್ತಿಚಿತ್ರಗಳು. Int J Kannada Res 2023;9(2):116-121.
Related Journal Subscription
International Journal of Kannada Research

International Journal of Kannada Research

Call for book chapter
Journals List Click Here Research Journals Research Journals
International Journal of Kannada Research