Contact: +91-9711224068

Kannada Journal

International Journal of Kannada Research

  • Printed Journal
  • Indexed Journal
  • Refereed Journal
  • Peer Reviewed Journal

‘ಅನುವಾದ ಸಾಹಿತ್ಯ: ಒಂದು ಅವಲೋಕನ’

2023, Vol. 9 Issue 2, Part B
‘ಅನುವಾದ ಸಾಹಿತ್ಯ: ಒಂದು ಅವಲೋಕನ’
Author(s): ನಾಗರಾಜ ಎನ್
Abstract: ಭಾಷೆಗಳು ನಿರ್ಮಿಸುವ ಅಡ್ಡಗೋಡೆಗಳನ್ನು ಇಲ್ಲವಾಗಿಸಿ ಜನರನ್ನು ಪರಸ್ಪರ ಹತ್ತಿರ ತರುವ ಸಾಧನವೇ ಭಾಷಾಂತರ ಅಥವಾ ಅನುವಾದ. ಇಂದು ಅನೇಕ ವಿಶ್ವವಿದ್ಯಾಲಯಗಳಲ್ಲಿ ಅನುವಾದ ವಿಶೇಷ ಅಧ್ಯಯನದ ವಿಷಯವಾಗಿದೆ. ರಷ್ಯಾ, ಜಪಾನ್ ಮೊದಲಾದ ಕೆಲವು ಮುಂದುವರಿದ ರಾಷ್ಟçಗಳಲ್ಲಿರುವ ಭಾಷಾಂತರ ಶಾಖೆಗಳು ಕೇವಲ ಮೂವತ್ತು ದಿನಗಳಲ್ಲಿಯೇ ಬೇರೆ ಯಾವುದೇ ಭಾಷೆಯಲ್ಲಿ ಪ್ರಕಟಗೊಂಡ ಮಹತ್ವದ ಕೃತಿಗಳನ್ನು ತಮ್ಮ ಭಾಷೆಗೆ ಅನುವಾದಿಸಿಕೊಳ್ಳುವ ವ್ಯವಸ್ಥೆಯನ್ನು ಹೊಂದಿವೆ. ಈ ಎಲ್ಲಾ ಬೆಳವಣಿಗೆಗಳು ಕಾಲ, ದೇಶ, ಭಾಷೆಗಳನ್ನು ಮೀರಿದ ಅನುವಾದದ ವ್ಯಾಪ್ತಿಯನ್ನು ಸೂಚಿಸುತ್ತವೆ.
ಉದ್ದೇಶ ಮತ್ತು ವ್ಯಾಪ್ತಿ: ಯಾವುದೇ ದೇಶದ ಭಾಷೆಯಿರಲಿ ಅದು ಭಾಷಾಂತರ/ಅನುವಾದದ ಮೂಲಕವೇ ಬೆಳೆದಿರುವುದನ್ನು ಹಾಗೂ ಇತರೆ ಭಾಷಿಕ ವಲಯಗಳಲ್ಲಿ ವಿಸ್ತರಿಸಿಕೊಂಡಿರುವುದನ್ನು ಗುರುತಿಸಬಹುದಾಗಿದೆ. ಜಗತ್ತಿನ ಎಲ್ಲಾ ಭಾಷೆ, ಸಾಹಿತ್ಯಗಳನ್ನು ಭಾಷಾಂತರ/ಅನುವಾದದ ಪ್ರಕ್ರಿಯೆ ನಿರಂತರವಾಗಿ ಪೋಷಿಸುತ್ತಲೇ ಬಂದಿದೆ. ಆದರೆ ಇದು ಯಾವ ಪ್ರಮಾಣದಲ್ಲಿ ಯಾವ ಯಾವ ಕಾಲದಲ್ಲಿ ಎಷ್ಟೆಷ್ಟು ನಡೆದಿದೆ ಎಂಬುದರ ನಿಖರ ಮಾಹಿತಿ ಮಾತ್ರ ನಮಗೆ ಇಂದಿಗೂ ಲಭ್ಯವಿಲ್ಲ. ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಬೇಕಿದೆ.
ಈIಓಆIಓಉS ಂಓಆ IಒPಐIಅಂಖಿIಔಓS (ಫಲಿತಗಳು)
. ಅನ್ಯಭಾಷೆ, ಸಂಸ್ಕೃತಿಯ ವಿವರಗಳು ಓದುಗರ ಜ್ಞಾನವಲಯವನ್ನು ವಿಸ್ತರಿಸುವುದರೊಂದಿಗೆ ತಮ್ಮ ನೆಲದ ಸಂಸ್ಕೃತಿ, ಸಾಹಿತ್ಯದ ಜೊತೆಗೆ ತೌಲನಿಕವಾಗಿಯೂ ಒರೆಗೆ ಹಚ್ಚಲು ಪ್ರೇರೇಪಿಸುತ್ತದೆ.
. ಅನುವಾದ ಪ್ರಕ್ರಿಯೆಯಲ್ಲಿ ರೂಪುಗೊಂಡ ಕೃತಿಗಳ, ಅನುವಾದಕರ, ಪ್ರಕಾಶಕರ ಲೆಕ್ಕವೂ ಸಹ ನಿಖರವಾಗಿ ಇಲ್ಲ. ಇದು ಕನ್ನಡವೂ ಒಳಗೊಂಡAತೆ ಭಾರತದ ಬಹುತೇಕ ಎಲ್ಲಾ ಭಾಷೆಗಳಿಗೆ ಅನ್ವಯವಾಗುವ ಮಾತು.
ಸಮಾರೋಪ: ಅನುವಾದಗಳ ಮೂಲಕ ಅನ್ಯಭಾಷಾ ಸಂಸ್ಕೃತಿಗಳ ಸಂಪರ್ಕವೇ ಕಾರಣವಾಗಿ ಭಾಷೆ, ಸಾಹಿತ್ಯಗಳು ಅಭಿವೃದ್ಧಿಯಾಗುತ್ತವೆ. ಯಾವುದೇ ಭಾಷೆಯ ಸಾಹಿತ್ಯ ಸೃಷ್ಟಿಯ ಹಿಂದೆ ಅನ್ಯಭಾಷಾ ಪ್ರಭಾವ ನಿಚ್ಚಳವಾಗಿರುತ್ತದೆ. ಅಲ್ಲದೆ ಒಂದು ಭಾಷೆಯ ಬರವಣಿಗೆಯ ಶೈಲಿ, ವಸ್ತು, ರೂಪಕ್ಕೆ ಸಂಬAಧಿಸಿದAತೆ ಇನ್ನೊಂದು ಭಾಷಾ ಕೃತಿಯನ್ನು ಆದರ್ಶವಾಗಿ ಸ್ವೀಕರಿಸಿದ ದೃಷ್ಟಾಂತಗಳು ಕನ್ನಡದಲ್ಲೂ ಇವೆ. ಇವತ್ತಿನ ಸಂದರ್ಭದಲ್ಲಿ ಸಮಗ್ರವಾಗಿ ಕನ್ನಡ ಸಾಹಿತ್ಯವನ್ನು ಅನುವಾದ ಪ್ರಕ್ರಿಯೆ ಪೋಷಿಸಿದ ಬಗೆಯನ್ನು ಕಂಡುಕೊಳ್ಳುವುದು ಅಧ್ಯಯನದ ದೃಷ್ಟಿಯಿಂದ ಅಪೇಕ್ಷಣೀಯ.
Pages: 108-113  |  337 Views  101 Downloads


International Journal of Kannada Research
How to cite this article:
ನಾಗರಾಜ ಎನ್. ‘ಅನುವಾದ ಸಾಹಿತ್ಯ: ಒಂದು ಅವಲೋಕನ’. Int J Kannada Res 2023;9(2):108-113.
Related Journal Subscription
International Journal of Kannada Research

International Journal of Kannada Research

Call for book chapter
Journals List Click Here Research Journals Research Journals
International Journal of Kannada Research