2023, Vol. 9 Issue 2, Part A
ಭಾರತದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು: ಅಂಕಿ-ಅಂಶಗಳ ವಿಮರ್ಶೆ (2009-10 ರಿಂದ 2018-19)
Author(s): ಡಾ. ಕಲಾವತಿ.ಹೆಚ್.ಕೆ, ಡಾ. ಗೋಪಾಲ.ಎಸ್, ಡಾ. ಎಂ.ರಾಚಪ್ಪಾಜಿ
Abstract: ಭಾರತೀಯ ಸಮಾಜದಲ್ಲಿ ಮಹಿಳೆಗೆ ಒಂದು ಮಹತ್ವದ ಗೌರವಾನ್ವಿತ ಸ್ಥಾನವಿದೆ. ಹಾಗೆಯೇ ವೇದಗಳ ಕಾಲದಲ್ಲಿ ಮಹಿಳೆಯನ್ನು ಮಾತೆ, ಸೃಷ್ಟಿಕರ್ತೆ, ಒಂದು ಹೊಸ ಜೀವ ನೀಡುವವಳು ಮತ್ತು ದೇವಿಯ ಸ್ವರೂಪವೆಂದು, ದೇವತೆಯಾಗಿ ಪೂಜ್ಯನೀಯಳು ಎಂದು ವೈಭವೀಕರಿಸಲ್ಪಡುತ್ತಾಳೆ. ಆದರೆ ವೈಭವೀಕರಣವು ಅದೇ ಸಮಯದಲ್ಲಿ ಪೌರಾಣಿಕತೆಯೂ ಕೂಡ ಆಗಿತ್ತು ಎಂದು ಹೇಳಬಹುದು. ಭಾರತದ ಸಾಮಾಜಿಕ ವ್ಯವಸ್ಥೆಯ ಸಂದರ್ಭದಲ್ಲಿ ಮಹಿಳೆಯರು ಪುರುಷ ಪ್ರಧಾನ ಪ್ರಭುತ್ವದಲ್ಲಿ ಸಂಪೂರ್ಣವಾಗಿ ಎಲ್ಲಾ ಹಕ್ಕು ಹಾಗೂ ಅಧಿಕಾರಗಳನ್ನು ಕಳೆದುಕೊಂಡು ನಿಗ್ರಹಿಸಲ್ಪಟ್ಟಿದ್ದಾಳೆ. ಆ ಮೂಲಕವಾಗಿಯೇ ಮಹಿಳೆಯು ಪುರುಷನ ಅಧೀನಳಾಗಿದ್ದಾಳೆ ಎಂಬುದನ್ನು ಸಮಕಾಲೀನ ಸಂದರ್ಭದಲ್ಲಿಯೂ ಕೂಡ ಗುರುತಿಸಬಹುದು. ಈ ಹಿನ್ನೆಲೆಯಲ್ಲಿ ಭಾರತ ದೇಶದಲ್ಲಿನ ಮಹಿಳೆಯರು ಪ್ರತಿ ಹಂತದಲ್ಲಿಯೂ ಪುರುಷರ ಅಧೀನದಲ್ಲಿದ್ದು ತುಳಿತಕ್ಕೆ ಒಳಗಾಗಿ ಬಲಿಪಶುವಾಗುತ್ತಿದ್ದಾಳೆ. ಏಕೆಂದರೆ, ಸಮಾಜದಲ್ಲಿನ ಹಿಂಸಾಚಾರದ ದಬ್ಬಾಳಿಕೆಯೊಂದಿಗೆ ಸಾಂಪ್ರದಾಯಿಕ ನಂಬಿಕೆಗಳಿಗೆ ಹೆಚ್ಚು ಅಂಟಿಕೊಂಡಿದ್ದಾರೆ ಎಂದು ನಂಬಲಾಗಿದೆ. ಮಹಿಳೆಯು ಭಾರತದಲ್ಲಿ ಸಾಮಾಜಿಕವಾಗಿ, ದೈಹಿಕವಾಗಿ, ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿಯೂ ಕೂಡ ದೌರ್ಜನ್ಯಕ್ಕೆ ಒಳಗಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಅದನ್ನು ಮತ್ತೆ ಪಡೆಯಲು ಪ್ರತಿಭಟಿಸುತ್ತಾ ಬಂದಿರುತ್ತಾಳೆ ಎಂಬುದು ಜಾಗತಿಕ ಸತ್ಯ.
Pages: 10-20 | 309 Views 78 Downloads
How to cite this article:
ಡಾ. ಕಲಾವತಿ.ಹೆಚ್.ಕೆ, ಡಾ. ಗೋಪಾಲ.ಎಸ್, ಡಾ. ಎಂ.ರಾಚಪ್ಪಾಜಿ. ಭಾರತದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು: ಅಂಕಿ-ಅಂಶಗಳ ವಿಮರ್ಶೆ (2009-10 ರಿಂದ 2018-19). Int J Kannada Res 2023;9(2):10-20.