2023, Vol. 9 Issue 1, Part B
Abstract: ಬೆಳಕು ಶಕ್ತಿಯ ಪರಮ ರೂಪ. ದ್ಯುತಿ, ಎಂಬುದು ಬೆಳಕಿನ ಇನ್ನೊಂದು ಹೆಸರು. ಈ ಭೂಮಂಡಲದಲ್ಲಿ (ಭೂಮಿಯಲ್ಲಿ) ಬೆಳಕಿನ ಸಹಾಯವಿಲ್ಲದೆ ಜರುಗುವ ಕ್ರಿಯೆಗಳೇನಾದರೂ ಇದ್ದಲ್ಲಿ, ಅವುಗಳು ವಿರಳದಲ್ಲಿಯೂ, ವಿರಳಾತಿವಿರಳವೇ ಸರಿ!. ಭೂಮಿಗೆ, ಬೆಳಕಿನ ಮೂಲ ಆಕರ ಸೂರ್ಯ (ನಕ್ಷತ್ರಗಳ ಪ್ರಸ್ತಾಪವಿಲ್ಲ). ಬೆಳಕಿನಿಂದ ಭೂಮಿಯ ಮೇಲೆ ಸಂಭವಿಸುವ ಬಹುಮುಖ್ಯವಾದ ಕ್ರಿಯೆಯೆಂದರೆ, ಅದು, ದ್ಯುತಿಸಂಶ್ಲೇಷಣೆ (Photosynthesis)
1. ದ್ಯುತಿಸಂಶ್ಲೇಷಣೆಯಿಂದ ಉತ್ಪತ್ತಿಯಾಗುವ (ಅಂದರೆ, ಪಿಷ್ಟದ ಜಲವಿಭಜನೆಯಿಂದ ದೊರೆಯುವ) ಪದಾರ್ಥವೇ ಗ್ಲೂಕೋಸ್2. ಇದು, ಮಾನವನ ದೇಹ ಮತ್ತು ಮಿದುಳಿಗೆ ಅವಶ್ಯಕವಾಗಿರುವ ಶಕ್ತಿಯ ಪ್ರಾಥಮಿಕ ಮೂಲ. ದ್ಯುತಿಸಂಶ್ಲೇಷಣೆ ಕ್ರಿಯೆಯು ವಾತಾವರಣದಿಂದ ಇಂಗಾಲದ ಡೈಆಕ್ಸೈಡ್ (Cabon dioxide) ಅನ್ನು ತೆಗೆದುಹಾಕಿ ಆಮ್ಲಜನಕವನ್ನು (Oxygen) ಬಿಡುಗಡೆ ಮಾಡುತ್ತದೆ. ಹೀಗಾಗಿ, ಈ ಕ್ರಿಯೆಯು ಮಾನವನಿಗೆ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಅತ್ಯಾವಶ್ಯವಾಗಿದೆ. ನರಕೋಶಗಳು (Neurons) ಮಾನವನ ನರವ್ಯೂಹದ (Nervous System) ಪ್ರಮುಖ ಭಾಗ. ಇವುಗಳನ್ನು ಇಂದ್ರಿಯ ದತ್ತಾಂಶಗಳ (ಸಂದೇಶ) ವಾಹಕಗಳೆಂದು ಕರೆಯುತ್ತಾರೆ. ಹಾಗೂ ಮಿದುಳಿನ ವಿವಿಧ ಪ್ರದೇಶಗಳ ನಡುವೆ, ಮಿದುಳು (Brain) ಮತ್ತು ನರಮಂಡಲದ ಉಳಿದ ಭಾಗಗಳ ನಡುವೆ ಮಾಹಿತಿಯನ್ನು ರವಾನಿಸಲು ಮಿದುಳಿನಲ್ಲಿ ಉದ್ಭವಿಸುವ ವಿದ್ಯುತ್ ಪ್ರಚೋದನೆಗಳನ್ನು (Electrical Impulses) ಮತ್ತು ರಾಸಾಯನಿಕ ಸಂಕೇತಗಳನ್ನು (Chemical Signals) ಬಳಸುತ್ತವೆ. ಬೆಳಕಿನಿಂದ ಮಿದುಳಿನಲ್ಲಿ ಪ್ರತಿಕ್ಷಣವೂ ಹಲವಾರು ಕ್ರಿಯೆಗಳು ಜರುಗುತ್ತವೆ. ಮಿದುಳಿನ ಎಲ್ಲ ಚಟುವಟಿಕೆಗಳಿಗೂ, ಬೆಳಕಿಗೂ (ಭೌತಿಕ ಪರಿಸ್ಥಿತಿ)
ನೇರ ನಂಟಿದೆ ಎಂದು ಸಂಶೋಧನೆಗಳು ಸಾಭೀತುಪಡಿಸಿವೆ. ಮಿದುಳಿನಲ್ಲಿನ ದುರ್ಬಲ ಫೆÇೀಟಾನ್(ಬೆಳಕಿನ ಸೂಕ್ಷ್ಮರೂಪ) ಗಳಿಂದ (Biophoton) ಜರುಗಲ್ಪಡುವ ವಿದ್ಯಮಾನಗಳಾದ ಪ್ರತಿಫಲನ, ಪ್ರಸರಣ, ಚೆದುರುವಿಕೆ, ವಿವರ್ತನ, ವ್ಯತಿಕರಣ, ಧ್ರುವೀಕರಣ ಮತ್ತು ಪೂರ್ಣಲೇಖನ (Holographic image) ಗಳು, ಬೆಳಕಿನಿಂದ ಉಂಟಾಗುವ ಎಲ್ಲಾ ವಿದ್ಯಮಾನಗಳಿಗೂ ನೇರ ಸಾಮ್ಯತೆ ಇದೆಯೆಂಬ ನೆಲೆಯಲ್ಲಿ, ಬೆಳಕಿನ ದ್ವೈತ (Duality) ಗುಣಗಳಾದ ಕಣರೂಪ ಮತ್ತು ತರಂಗರೂಪ ಪರಿಕಲ್ಪನೆಯ ವೈಶಿಷ್ಟ್ಯತೆಗಳಿಗೆ ಅನುಗುಣವಾಗಿ ದ್ಯುತಿ ವಿದ್ಯಮಾನಗಳನ್ನು ಅಂತಃಕರಿಸಿ, ಮಾನವನ ನಡೆಗಳೊಂದಿಗೆ ತುಲನೆಮಾಡಿ, ಸ್ವಗತ ತಂದುಕೊಳ್ಳಬಹುದಾದಂತಹ ಮಹತ್ತರ ಬದಲಾವಣೆಗಳನ್ನು ಕುರಿತು ರಚಿಸಲಾಗಿರುವ ತುಲನಾತ್ಮಕ ಲೇಖನವಿದು. ಈ ಲೇಖನದಲ್ಲಿನ ಅನೇಕ ಅಂಶಗಳು ಕೊಂಚ ಆದರ್ಶಮಾನವೆನಿಸಿದರೂ ಕೂಡ, ವ್ಯಕ್ತಿಗತವಾಗಿ ತಂದುಕೊಳ್ಳಬಹುದಾದಂತಹ ಮಾರ್ಪಾಡುಗಳ ಅವಶ್ಯಕತೆಗೆ ಬೆಳಕು ಚೆಲ್ಲುವ ಒಂದು ವಿಶೇಷ ಪ್ರಯತ್ನವಿದು!.