Contact: +91-9711224068

Kannada Journal

International Journal of Kannada Research

  • Printed Journal
  • Indexed Journal
  • Refereed Journal
  • Peer Reviewed Journal
Peer Reviewed Journal

‘ಕೂರ್ಮಾವತಾರ’ ಸಾಹಿತ್ಯಕ ಅಭಿವ್ಯಕ್ತಿ ಮತ್ತು ಸಿನಿಮಾ ಪ್ರಯೋಗಶೀಲತೆ

2023, Vol. 9 Issue 1, Part B
‘ಕೂರ್ಮಾವತಾರ’ ಸಾಹಿತ್ಯಕ ಅಭಿವ್ಯಕ್ತಿ ಮತ್ತು ಸಿನಿಮಾ ಪ್ರಯೋಗಶೀಲತೆ
Author(s): ಡಾ. ಪದ್ಮನಾಭ
Abstract: ಕನ್ನಡದ ಬಹುಮುಖ್ಯ ಕಥನಪ್ರತಿಭೆ ಕುಂ.ವೀರಭದ್ರಪ್ಪ ಅವರ ಕಥೆ ‘ಕೂರ್ಮಾವತಾರ’. ಇದು ಹೊಳೆಸುವ ಅರ್ಥವಿನ್ಯಾಸಕ್ಕೆ ವಿವಿಧ ಆಯಾಮಗಳಿವೆ. ಎಲ್ಲ ಕಾಲಕ್ಕೂ ಸಲ್ಲುವಂಥ ಕಾಣ್ಕೆಯ ವ್ಯಕ್ತಿತ್ವವಾಗಿರುವ ಗಾಂಧಿ ಇಲ್ಲಿ ಕೇಂದ್ರಬಿಂದುವಾದರೂ ಅದನ್ನು ಆಧರಿಸಿ ಕಥನ ತಲುಪಿಕೊಳ್ಳಲಿಚ್ಛಿಸುವ ಗಮ್ಯಕ್ಕೆ ಉದಾತ್ತತೆಯ ಮೌಲ್ಯದ ಆವರಣವಿದೆ. ಓದಿಸಿಕೊಳ್ಳುತ್ತಲೇ ದರ್ಶನದ ಭಿನ್ನ ಅನುಭವ ನೀಡುವ, ಸಮಕಾಲೀನ ಸಂಕಟಗಳ ಜೊತೆಗೆ ನಂಟು ಏರ್ಪಡಿಸಿಕೊಳ್ಳಲು ಅನುವುಮಾಡಿಕೊಡುವ ಶಕ್ತಿ ಕುಂವೀ ಕಥನಾಭಿವ್ಯಕ್ತಿಗೆ ಇದೆ. ಗಿರೀಶ್ ಕಾಸರವಳ್ಳಿ ಅವರ ನಿರ್ದೇಶಕತ್ವವು ಅದಕ್ಕೆ ಅನನ್ಯತೆಯ ಸೊಗಡನ್ನು ಧಾರೆ ಎರೆದಿದೆ. ಕುಂವೀ ಅವರು ಕನ್ನಡ ಕಥನ ಸಾಹಿತ್ಯ ಪರಂಪರೆಯು ಹೊಸದೊಂದು ಎತ್ತರ ಕಂಡುಕೊಳ್ಳುವುದಕ್ಕೆ ಪೂರಕವಾಗುವಂಥ ಗುಣಲಕ್ಷಣದ ಕೊಡುಗೆ ನೀಡಿದ್ದಕ್ಕೆ ‘ಕೂರ್ಮಾವತಾರ’ ಕಥೆ ಸಾಕ್ಷಿ ನುಡಿಯುತ್ತದೆ. ಇದನ್ನು ಆಧರಿಸಿ ಇದೇ ಹೆಸರಿನಲ್ಲಿ ಗಿರೀಶ್ ಕಾಸರವಳ್ಳಿ ಅವರಿಂದ ರೂಪಿತವಾದ ಸಿನಿಮಾ ಸಾಹಿತ್ಯಕ ಅಭಿವ್ಯಕ್ತಿಗೆ ಚಲನೆಯ ಜೀವಂತಿಕೆ ಒದಗಿಸಿದ ಶ್ರೇಷ್ಠತೆಗೆ ನಿದರ್ಶನವಾಗಿ ಗಮನ ಸೆಳೆದಿದೆ. ಈ ಕಥೆಯ ಮೂಲಕ ಸಾಧಿತವಾದ ಸಮಕಾಲೀನ ಅಭಿವ್ಯಕ್ತಿ ಮತ್ತು ಸಿನಿಮಾ ಪ್ರಯೋಗಶೀಲತೆಯ ವಿಶ್ಲೇಷಣೆ ಈ ಸಂಶೋಧನಾ ಪ್ರಬಂಧದ ಉದ್ದೇಶ.
Pages: 75-79  |  381 Views  100 Downloads


International Journal of Kannada Research
How to cite this article:
ಡಾ. ಪದ್ಮನಾಭ. ‘ಕೂರ್ಮಾವತಾರ’ ಸಾಹಿತ್ಯಕ ಅಭಿವ್ಯಕ್ತಿ ಮತ್ತು ಸಿನಿಮಾ ಪ್ರಯೋಗಶೀಲತೆ. Int J Kannada Res 2023;9(1):75-79.
Related Journal Subscription
International Journal of Kannada Research

International Journal of Kannada Research

Call for book chapter
Journals List Click Here Research Journals Research Journals
International Journal of Kannada Research