ಬಡಜನರ ಹಸಿವು ನೀಗಿಸುವಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆಯ ಪಾತ್ರ
2022, Vol. 8 Issue 3, Part B
ಬಡಜನರ ಹಸಿವು ನೀಗಿಸುವಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆಯ ಪಾತ್ರ
Author(s): Dr. H. M Basavanna and Dr. S Yashoda
Abstract: ದೇಶದಲ್ಲಿ ಆಡಳಿತ ನಡೆಸಿದ ಪ್ರತಿಯೊಂದು ಸರ್ಕಾರವು ಜನರ ಬಡತನ, ಅನಕ್ಷರತೆ, ನಿರುದ್ಯೋಗ ಹಸಿವು ಮತ್ತು ಆನಾರೋಗ್ಯ ಇತ್ಯಾದಿ ಸಮಸ್ಯೆಗಳನ್ನು ನಿವಾರಿಸಲು ಹಲವಾರು ಜನಪರ ಯೋಜನೆಗಳನ್ನು ರೂಪಿಸಿಕೊಂಡು ಬಂದಿವೆ. ಸಾಧ್ಯವಾದಷ್ಟು ಮಟ್ಟಿಗೆ ಅಂತಹ ಸಮಸ್ಯೆಗಳನ್ನು ಹಂತ ಹಂತವಾಗಿ ಕಡಿಮೆ ಮಾಡಿವೆ. “ಹಸಿವಿನಿಂದ ಬಳಲುವ ಜನರಿಗೆ ಆಹಾರ ನೀಡುವುದು ಪ್ರತಿ ಕಲ್ಯಾಣ ರಾಜ್ಯದ ಮೊದಲ ಜವಾಬ್ದಾರಿಯಾಗಿದೆ” ಎಂಬ ಸದುದ್ದೇಶದಿಂದ ಜನರ ಬಡತನ, ಹಸಿವು ಹಾಗೂ ಅಪೌಷ್ಠಿಕತೆ ನಿವಾರಿಸಲು ಭಾರತ ಸರ್ಕಾರ ‘ರಾಪ್ಟಿçÃಯ ಆಹಾರ ಭದ್ರತಾ ಕಾಯ್ದೆ’, ೨೦೧೩ನ್ನು ಜಾರಿಗೆ ತರಲಾಗಿದೆ. ರಾಜ್ಯದ ಅಂದಿನ ಮುಖ್ಯಮಂತ್ರಿಗಳು, ಪ್ರಸ್ತುತ ವಿರೋಧ ಪಕ್ಷದ ನಾಯಕರದ ಶ್ರೀ. ಸಿದ್ದರಾಮಯ್ಯನವರು ಬಡವರ ಮೇಲಿನ ನೈಜ ಕಾಳಜಿಯಿಂದ “ಅನ್ನಭಾಗ್ಯ” ಯೋಜನೆಯ ಜೊತೆಗೆ ನಗರ ಪ್ರದೇಶದ ಬಡಜನರಿಗೆ ರಿಯಾಯಿತಿ ದರದಲ್ಲಿ ಆಹಾರ ವಿತರಿಸುವ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಲೇಖನವು ಯೋಜನೆಯ ಸಾಧಕ-ಭಾಧಕಗಳನ್ನು ಸವಿಸ್ತಾರವಾಗಿ ಚರ್ಚಿಸುತ್ತದೆ.
Dr. H. M Basavanna, Dr. S Yashoda. ಬಡಜನರ ಹಸಿವು ನೀಗಿಸುವಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆಯ ಪಾತ್ರ. Int J Kannada Res 2022;8(3):97-104. DOI: 10.22271/24545813.2022.v8.i3b.741