2022, Vol. 8 Issue 2, Part A
ಕನ್ನಡ ಸಿನಿ ರಂಗಕ್ಕೆ ಪುನೀತ್ ರಾಜ್‍ಕುಮಾರ್‍ರವರ ನೆನಪು: ಒಂದು ಅಧ್ಯಯನ
Author(s): ಮುನಿಸ್ವಾಮಿ, ಶ್ರೀನಿವಾಸ್ ಸಿ.ಎನ್
Abstract: ಪುನೀತ್‍ರಾಜ್‍ಕುಮಾರ್ (ಅಪ್ಪು) ಕನ್ನಡ ಸಿನಿಮಾ ನಾಯಕ ನಟ. ಅವರು ಸಿನಿಮಾ ರಂಗದಲ್ಲಿ ನಟನಾಗಿ ಮಾತ್ರವಲ್ಲದೆ ಹಿನ್ನೆಲೆ ಗಾಯಕ ಮತ್ತು ದೂರದರ್ಶನ ನಿರೂಪಕ ಮತ್ತು ಸಿನಿಮಾ ನಿರ್ಮಾಪಕರಾಗಿ ತಮ್ಮ ಛಾಪು ಮೂಡಿಸಿದ್ದಾರೆ. ಬಾಲ್ಯದಲ್ಲಿ ತಂದೆಯ ಜೊತೆ ಬಾಲ ನಟನಾಗಿ ಅಭಿನಯಿಸಿ ತಂದೆಯ ತಕ್ಕ ಮಗನಾಗಿ ಖ್ಯಾತಿಗಳಿಸಿದ್ದರು. ಅವರ ಅಭಿನಯದ ಬೆಟ್ಟದ ಹೂವು ಚಿತ್ರದ ‘ರಾಮು' ಪಾತ್ರಕ್ಕೆ ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಕೇವಲ 10ನೇ ವಯಸ್ಸಿಗೆ ಪಾತ್ರರಾಗಿದ್ದರು. ಅವರ ಅಭಿನಯದ ಮುಖಾಂತರ ಕರ್ನಾಟಕಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ತಂದು ಕೊಟ್ಟತಂಹ ಕೀರ್ತಿ ಪುನೀತ್ ರಾಜ್‍ಕುಮಾರ್‍ರವರಿಗೆ ಸಲ್ಲುತ್ತದೆ. ಅವರು ನಾಯಕ ನಟನಾಗಿ 29 ಚಲನಚಿತ್ರಗಳಲ್ಲಿ ನಟನೆ ಮಾಡಿದ್ದು, ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಇವರು ಹಿನ್ನಲೆ ಗಾಯಕರಾಗಿದ್ದು ಮತ್ತು ಪಿಆರ್‍ಕೆ ಆಡಿಯೋ ಮತ್ತು ಪಿಆರ್‍ಕೆ ಪ್ರೊಡಕ್ಷನ್ ಸಂಸ್ಥಾಪಕರಾಗಿದ್ದಾರೆ. ಸರ್ಕಾರದ ಸಾಮಾಜಮುಖಿ ಕಾರ್ಯಕ್ರಮಗಳಲ್ಲಿ ರಾಯಭಾರಿಯಾಗಿ ಮತ್ತು ಸಮಾಜ ಸೇವೆಗಳನ್ನು ಮಾಡಿದ್ದಾರೆ. ಅಪ್ಪುವಿನ ಅಕಾಲಿಕ ಮರಣದಿಂದ ಇಡೀ ಕರ್ನಾಟಕವೇ ಶೋಕ ಸಾಗರದಲ್ಲಿ ಮುಳೀಗಿತು. ವ್ಯಕ್ತಿಗಿಂತಲ್ಲೂ ವ್ಯಕ್ತಿತ್ವ ಮೇಲು ಬದುಕಿದ ರೀತಿ ಮಹತ್ವದ್ದು ಎಂಬುದನ್ನು ಪುನೀತ್ ನಿರೂಪಿಸಿದರು. ಕನ್ನಡ ಚಿತ್ರರಂಗದಲ್ಲಿ ಪುನೀತ್ ರಾಜ್‍ಕುಮಾರ್ ಅಜಾರಾಮಜರ. ಎಂದೆಂದಿಗೂ ಮಾಸದ ರಾಜರತ್ನ.
Pages: 35-39 | 428 Views 83 Downloads
How to cite this article:
ಮುನಿಸ್ವಾಮಿ, ಶ್ರೀನಿವಾಸ್ ಸಿ.ಎನ್. ಕನ್ನಡ ಸಿನಿ ರಂಗಕ್ಕೆ ಪುನೀತ್ ರಾಜ್‍ಕುಮಾರ್‍ರವರ ನೆನಪು: ಒಂದು ಅಧ್ಯಯನ. Int J Kannada Res 2022;8(2):35-39.