2022, Vol. 8 Issue 2, Part A
Abstract: ಡಾ|| ಬಾಬಾ ಸಾಹೇಬ್ ಅಂಬೇಡ್ಕರ್‍ರವರು ಸಾಮಾಜಿಕ ನ್ಯಾಯ ವಿಧಾನಕ್ಕೆಒಂದು ದಿಕ್ಕು ದೆಸೆಯನ್ನು ನಿರ್ಧೇಶಿಸಿದ ಮಹನಿಯರು. ಸಾಮಾಜಿಕ ನ್ಯಾಯಕ್ಕಾಗಿ ನಡೆಸಿದ ಹೋರಾಟಕ್ಕೆ ನಾಂದಿ ಹಾಡಿದ ಆ ಕಾಲವನ್ನು ಸಾಮಾಜಿಕ ನ್ಯಾಯಶಕೆಯೆಂದು ಹೇಳಬಹುದು. ಅಂಬೇಡ್ಕರ ಅವರ ಸಾಮಾಜಿಕ ನ್ಯಾಯತತ್ವವು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಸಮಾನತೆಗಳೆಂಬವವು ಸಮಾಜದಲ್ಲಿ ಇರಬಾರದೆಂದು ಹೇಳುತ್ತದೆ. ದೇಶ, ಜಾತಿ, ಮತ, ಕುಲ, ಲಿಂಗಭೇಧ, ಸಂಪನ್ನತೆ ಸಾಮಾಜಿಕ ಅಂತಸ್ತು ಇಲ್ಲವೇ ರಾಜಕೀಯ ಪ್ರಭಾವದಿಂದ ಸಮಾಜದಲ್ಲಿ ವ್ಯಕ್ತಿಗಳ ಬಗ್ಗೆ ತಾರತಮ್ಯ ಇರಬಾರದೆಂದು ಹೇಳುತ್ತದೆ. ಒಂದು ಸಾಮಾಜಿಕ ಪದ್ಧತಿಯ ಪರಿಧಿಯಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಂಬಂಧವಾದ ನ್ಯಾಯ ಎಂಬುದು, ರಾಷ್ಟ್ರೀಯ ಜೀವನಕ್ರಮದಲ್ಲಿರುವ ಎಲ್ಲ ವಲಯಗಳಿಗೆ ಅನ್ವಯಿಸಬೇಕೆಂದು ಅವರ ಮುಖ್ಯ ಉದ್ಧೇಶವಾಗಿತು.್ತ ಅಂಬೇಡ್ಕರ್‍ರವರ ಸಾಮಾಜಿಕ ನ್ಯಾಯ ವಿಧಾನವು ಜಾತಿ ಮತ್ತು ವರ್ಗದ ಆಧಾರದಿಂದ ಸಮಾಜದಲ್ಲಿ ಮೇಲ್ವರ್ಗ ಮತ್ತು ಕೆಳವರ್ಗ, ಶ್ರೀಮಂತ ಮತ್ತು ಬಡವ ಎಂಬ ತಾರತಮ್ಯವನ್ನು ಸೃಷ್ಟಿಸುವ ಸಾಂಪ್ರದಾಯಿಕ ವ್ಯವಸ್ಥೆಯ ತಾಯಿಬೇರನ್ನು ಕಿತ್ತು ಸಾಮಾಜಿಕ ಮತ್ತು ಆರ್ಥಿಕ ಸಮಾನತೆ, ಸ್ವಾತಂತ್ರ್ಯಕ್ಕೆ ಸರ್ಕಾರ ಬರವಸೆ ನೀಡಬೇಕೆಂಬ ಅಂಶದ ಬಗ್ಗೆ ಪಟ್ಟು ಹಿಡಿದ ಅಂಬೇಡ್ಕರ ಸಮಾಜದ ತಳವರ್ಗದ ಜನರನ್ನು ಒಗ್ಗೂಡಿಸಿ, ಅವರ ಶೋಷಣೆಯ ವಿರುದ್ಧ ಹೋರಾಟವನ್ನು ನಡೆಸಿ ಸಂವಿಧಾನ ನಿರ್ಮಾಪಕರಾಗಿ ಶಾಸನಬದ್ಧವನ್ನು ಸ್ಥಾನವನ್ನು ಕಲ್ಪಿಸಿದ್ದಾರೆ. ಈ ವಿಷಯಗಳ ಜಾರಿಯಲ್ಲಿ ಸರ್ಕಾರಗಳನ್ನು ಜವಾಬ್ದಾರಿಯನ್ನಾಗಿ ಮಾಡಿದ್ದಾರೆ.
ಸಮಾಜದಲ್ಲಿರುವ ಅನೇಕ ಜಾಡ್ಯಗಳನ್ನು, ಸೃಷ್ಟಿಸಲಾಗಿರುವ ಮೇಲು-ಕೇಳನ್ನು ನಿವಾರಿಸುವುದಕ್ಕೆ, ಅಮಾನುಷವಾದ ಅಸ್ಪøಶ್ಯತೆಯನ್ನು ನಿರ್ಮೂಲನೆ ಮಾಡಿ ಎಲ್ಲರೂ ಸಂಪೂರ್ಣ ಮಾನವರಾಗಿ ಜೀವಿಸುವುದಕ್ಕೆ ಅವಕಾಶವುಳ್ಳ ಹೊಸ ಸಮಾಜದ ರಚನೆಗೆ ನಿರ್ಧೇಶನ ಮಾಡಿದ್ದಾರೆ. ಆದರೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಎಂಬುದು ಇಂದಿಗೂ ಈ ದೇಶದಲ್ಲಿ ‘ನಿಲುಕದ ಹಣ್ಣಾಗಿ’ ಏಕಿದೆಯೆಂದು, ಹಾಗೂ ಅವರ ಸಾಧನೆಯಲ್ಲಿ ಎಂತಹ ತೊಡಕುಗಳಿವೆಯೆಂದು ಮತ್ತು ಅವುಗಳನ್ನು ನಿವಾರಿಸುವುದಕ್ಕೆ ಅಂಬೇಡ್ಕರ್ ಸೂಚಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವುದಕ್ಕೆ ಜನರೆಲ್ಲ ಏಕೆ ಮುಂದಕ್ಕೆ ಬರಬೇಕಾಗಿದೆ ಎನ್ನುವ ದಲಿತರ ಸಾಮಾಜಿಕ ಚಿಂತನೆಯ ಸಂಗತಿಗಳನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ.