2022, Vol. 8 Issue 1, Part B
ಡಿಜಿಟಲ್ ಮಾಧ್ಯಮದ ಪ್ರಸ್ತುತ ಪ್ರವೃತ್ತಿಗಳು ಮತ್ತು ಪರಿಣಾಮ
Author(s): ಡಾ. ಶಿವಕುಮಾರ ಕಣಸೋಗಿ
Abstract: ಪತ್ರಿಕೋದ್ಯಮಕ್ಕೆ ವ್ಯವಸ್ಥಿತ ನಿಯಂತ್ರಣ ವ್ಯವಸ್ಥೆ ಇಲ್ಲದಿದ್ದಾಗ ಅಪಾಯ ಹೆಚ್ಚುವ ಸಾಧ್ಯತೆಗಳಿವೆ. ಉಳಿದವರಾರೂ ಅದನ್ನು ಮಾಡಲು ಸಾಧ್ಯವಿಲ್ಲ. ಅವರಿಂದ ಅದನ್ನು ನಿರೀಕ್ಷಿಸಲೂ ಸಾಧ್ಯವಿಲ್ಲ. ಅಲ್ಲದೆ ಈ ಸಮಸ್ಯೆಗೆ ಪರ್ಯಾಯ ಮಾರ್ಗೋಪಾಯಗಳೂ ಇಲ್ಲ. ಪರಸ್ಪರ ಒಡಂಬಡಿಕೆ, ಸಮನ್ವಯಗಳು ಪೂರಕವಾಗಿ ಕೆಲಸ ಮಾಡುವುದು ಅತ್ಯಗತ್ಯ. ಮಾಧ್ಯಮ ರೂಪಾಂತರ, ವಿಷಯದ ಮೌಲ್ಯ ಅಥವಾ ಡಿಜಿಟಲ್ ತಂತ್ರಜ್ಞಾನದಿಂದ ರಚಿಸಲಾದ ಕೆಲಸಗಳ ನಿರೀಕ್ಷೆ ಅನಂತ. ಹಲವು ಸಮಸ್ಯೆಗಳ ಮೇಲೆ ಸವಾರಿ ಮಾಡುವುದನ್ನು ತಡೆಯುವುದಕ್ಕಾಗಿ ಯಾರೂ ಕಾಯುವುದಿಲ್ಲ. ‘ಡಿಜಿಟಲ್ ಕ್ರಾಂತಿ'ಯ ಪರಿಣಾಮ ಮಾಧ್ಯಮ ಉದ್ಯಮದಲ್ಲಿ ಸಾಕಷ್ಟು ಪರಿವರ್ತನೆಯಾಗಿದೆ.
ಕಳೆದ ಎರಡು ದಶಕದಿಂದ ಜಗತ್ತಿನ ಸುದ್ದಿ ಮಾಧ್ಯಮಗಳು ತಮ್ಮದೇಯಾದ ಓದುಗರು ಮತ್ತು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಲವೊಮ್ಮೆ ಅವರನ್ನು ಸೆಳೆಯಲು ತಂತ್ರಜ್ಞಾನದ ಮೊರೆ ಹೊಕ್ಕಿದ್ದೂ ಆಗಿದೆ. ಈಗಂತೂ ಎಲ್ಲ ಪತ್ರಿಕೆಗಳು ಆನ್‍ಲೈನ್‍ನಲ್ಲಿ ಸಿಗುತ್ತಿವೆ. ಮೊಬೈಲ್... ವಾಚ್‍ನಲ್ಲಿಯೇ ಸುದ್ದಿಗಳನ್ನು ನೋಡುವ ತಂತ್ರಜ್ಞಾನ ಈಗಾಗಲೇ ಬಳಕೆಯಲ್ಲಿದೆ. ಕೃತಕ ಬುದ್ಧಿಮತ್ತೆ, ವಾಸ್ತವ ಚಿತ್ರಣ ವರ್ಧಕಗಳು ಸ್ವಯಂಚಾಲಿತ ಪತ್ರಿಕೋದ್ಯಮಕ್ಕೆ ಚಾಲನೆ ನೀಡಿವೆ. ಕೈಯಲ್ಲಿರುವ ಸ್ಮಾರ್ಟ್‍ಫೋನ್ ಆಚೆಗೂ ಜನರನ್ನು ಸಂಪರ್ಕಿಸುವ ತಂತ್ರಜ್ಞಾನದ ಅಗತ್ಯತೆಯ ಬಗ್ಗೆಯೂ ಚರ್ಚೆ ನಡೆಯುತ್ತಿವೆ. ಪ್ರಸ್ತುತ ಲೇಖನದಲ್ಲಿ ಮಾಧ್ಯಮ ಕ್ಷೇತ್ರದ ಮೇಲೆ ಮತ್ತು ಆ ಮೂಲಕ ಸಮಾಜದ ಮೇಲೆ ಪ್ರಭಾವ ಬೀರುತ್ತಿರುವ ತಂತ್ರಜ್ಞಾನದ ಕುರಿತು ವಿಶ್ಲೇಷಿಸಲಾಗಿದೆ.
Pages: 104-109 | 642 Views 128 Downloads
How to cite this article:
ಡಾ. ಶಿವಕುಮಾರ ಕಣಸೋಗಿ. ಡಿಜಿಟಲ್ ಮಾಧ್ಯಮದ ಪ್ರಸ್ತುತ ಪ್ರವೃತ್ತಿಗಳು ಮತ್ತು ಪರಿಣಾಮ. Int J Kannada Res 2022;8(1):104-109.