2022, Vol. 8 Issue 1, Part B
ಸಿದ್ಧಲಿಂಗಯ್ಯ ಅವರ ಏಕಲವ್ಯ: ಸಮಕಾಲೀನ ಆಶಯಗಳು
Author(s): ಡಾ. ಕೆ ಶಿವಾನಂದಯ್ಯ
Abstract: ಸಿದ್ಧಲಿಂಗಯ್ಯ ಅವರ ‘ಏಕಲವ್ಯ’ ನಾಟಕ ಕನ್ನಡದಲ್ಲಿ ಏಕಲವ್ಯ ಪ್ರಸಂಗವನ್ನಾಧರಿಸಿ ಪ್ರಕಟವಾದ ನಾಟಕಗಳಲ್ಲಿ ವಿಶಿಷ್ಟವಾದುದು. ಇದು ಮಹಾಭಾರತದ ಆದಿಪರ್ವದಲ್ಲಿನ ಆಖ್ಯಾನವನ್ನು ಆಧರಿಸಿ ರಚಿತವಾಗಿದೆ. ಪುರಾಣ ಕತೆಯನ್ನು ಸಮಕಾಲೀನ ಸಂದರ್ಭದ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ ವಿನೂತನ ಬಗೆಯನ್ನು ಈ ನಾಟಕದಲ್ಲಿ ಕಾಣಬಹುದು. ‘ಏಕಲವ್ಯ’ ನಾಟಕವು ರಂಗಪ್ರಯೋಗದ ದೃಷ್ಟಿಯಿಂದಲೂ ವಿಶಿಷ್ಟ ಕೃತಿ ಎನಿಸಿದೆ. ಕಾಡು ಮತ್ತು ನಾಡಿನ ಸಂಘರ್ಷದ ಕತೆಯಾಗಿ ಸಿದ್ಧಲಿಂಗಯ್ಯ ಅವರ ‘ಏಕಲವ್ಯ’ ನಾಟಕ ವಿಶಿಷ್ಟವೆನಿಸಿದೆ. ಸತತ ಪರಿಶ್ರಮ, ಶ್ರದ್ಧೆಯ ಜೊತೆಗೆ ಕಲಿಯಬೇಕೆಂಬ ಛಲದಿಂದ ಮಹತ್ತರವಾದುದನ್ನು ಸಾಧಿಸಬಹುದೆಂಬುದಕ್ಕೆ ‘ಏಕಲವ್ಯ’ ಆದರ್ಶ ಮಾದರಿ ಎನ್ನಬಹುದು.
Pages: 75-80 | 179 Views 17 Downloads
How to cite this article:
ಡಾ. ಕೆ ಶಿವಾನಂದಯ್ಯ. ಸಿದ್ಧಲಿಂಗಯ್ಯ ಅವರ ಏಕಲವ್ಯ: ಸಮಕಾಲೀನ ಆಶಯಗಳು. Int J Kannada Res 2022;8(1):75-80.