2022, Vol. 8 Issue 1, Part A
ವೀರಶೈವ ಪರಂಪರೆಯಲ್ಲಿ ಮಹಿಳಾ ಪ್ರತಿನಿಧೀಕರಣ
Author(s): Suneetha BV
Abstract: ಕನ್ನಡ ನೆ¯ದಲ್ಲಿ ವೈದಿಕ ಮತ ತತ್ವಗಳಿಗೆ ಎದುಗೊಂಡು ಪ್ರತಿರೋದ ಒಡ್ಡಿದ 12ನೇ ಶತಮಾನದ ಶರಣರು ತಮ್ಮ ಅನುಭವ ಮಂಟಪದಲ್ಲಿ ಮಹಿಳೆಯರೊಂದಿಗೆ ಸಮಾನವಾಗಿ ವೇದಿಕೆ ಹಂಚಿಕೊಂಡರು. ಇದ ಕಾರಣ ಚರಿತ್ರೆಯಲ್ಲಿ ಮೊದಲಬಾರಿಗೆ ಮಹಿಳೆ ತನ್ನಗೆ ಸಿಕ್ಕ ಅವಕಾಶದಿಂದ ಸಾಮಾಜಿಕ ಧಾರ್ಮಿಕ ಸ್ವತಂತ್ರ ಹಾಗೂ ಅಭಿವ್ಯಕ್ತಿಯ ರೂಪದಲ್ಲಿ ವಚನಗಳ ಮೂಲಕ ಮಾತಾಡಿದಳು. ಇಂತಹ ಅಪರೂಪದ ಅಭಿವ್ಯಕ್ತಿಯಲ್ಲಿ ಅವಳ ಅನುಭವ ಲೋಕವು ಮೊದಲಿಗೆ ಹೊಸದಾಗಿ ಅನಾವರಣಗೊಂಡಿತು. ಹೆಣ್ಣಿನ ಸಾರ್ವತ್ರಿಕತೆ ತೋರಿಸುವ ‘ಜಗವೆಲ್ಲಾ ಹೆಣ್ಣು ನೋಡಾ’ ಎಂಬ ಅಕ್ಕನ ನಡೆನುಡಿ, ಅನುಭವ ಮಂಟಪದ ನೆಲೆ ಬೆಲೆ ಇನ್ನಷ್ಟು ಎತ್ತರಕ್ಕೆ ಏರಿಸಿತು. ವಚನಕಾರ್ತಿಯರು ನಿರೂಪಿದ ವೈಜ್ಞಾನಿಕ ದೃಷ್ಟಿಕೋನ, ಲಿಂಗತಾರತ್ಯ ವಿಚಾರಗಳು, ಆಧ್ಯಾತ್ಮಿಕ ನೆಲೆಯ ಲಿಂಗಾಂಗ ಸಾಮರಸ್ಯ, ಸಾಮಾಜಿಕ ನೆಲೆಯ ಸಮಾನತೆಯು ಬಹು ಮುಖ್ಯವಾದ ಮಹಿಳಾಪರ ಕಾಳಜಿಗಳಾಗಿವೆ. ಈ ಕಾಲದ ವಚನಕಾರ್ತಿಯರಲ್ಲಿ ಮೊದಲ ಸ್ಥಾನ ಅಕ್ಕಮಹಾದೇವಿಗೆ ಮೀಸಲಾದರೆ ನಂತರದ ಪ್ರಮುಖರು ಗಂಗಾಬಿಕೆ, ನೀಲಾಂಬಿಕೆ, ಆಯ್ದಕ್ಕಿ ಲಕ್ಕಮ್ಮ, ಗೊಗ್ಗವ್ವೆ, ಕದಿರೆ ರೆಮ್ಮವ್ವ, ಕಾಳವ್ವೆ, ಕೊಟ್ಟಣದ ಸೊಮವ್ವೆ, ಸೂಳೆ ಸಂಕವ್ವ, ಸತ್ಯಕ್ಕ ಮುಂತಾದವರುÉ.
Pages: 46-49 | 477 Views 136 Downloads
How to cite this article:
Suneetha BV. ವೀರಶೈವ ಪರಂಪರೆಯಲ್ಲಿ ಮಹಿಳಾ ಪ್ರತಿನಿಧೀಕರಣ. Int J Kannada Res 2022;8(1):46-49.