2022, Vol. 8 Issue 1, Part A
ಪ್ರಸ್ತುತ ಸನ್ನಿವೇಶಗಳಲ್ಲಿ ಪೂರ್ವಭಾವಿ ಮಾಧ್ಯಮವಾಗಿ; ಡಿಜಿಟಲ್ ಮಾಧ್ಯಮಗಳು ಒಂದು ಸಮರ್ಥನೆ
Author(s): ಮಹಾಲಕ್ಷ್ಮಿ ಮ ಭೂಶಿ, ಡಾ. ಶಿವಕುಮಾರ ಕಣಸೋಗಿ
Abstract: ಡಿಜಿಟಲ್ ಮಾಧ್ಯಮಗಳು ಪ್ರಸ್ತುತ ಜನ ಜೀವನದ ಬದುಕಿನ ಶೈಲಿಯನ್ನು ಪಾಶ್ಚಿಮಾತ್ಯಗೊಳಿಸಿ ತನ್ನತ್ತ ಜನರ ಗಮನವನ್ನು ಸೆಳೆದಿವೆ. ಈ ಮಾಧ್ಯಮಗಳು ಜನರ ಬದುಕಿನ ಬದಲಾವಣೆ ಮತ್ತು ಬೆಳವಣಿಗೆಯ ರಚನೆ ಮತ್ತು ವ್ಯವಸ್ಥೆಗಷ್ಟೇ ಸೀಮಿತವಾಗಿರದೇ ರಾಜಕೀಯ, ಆರ್ಥಿಕ, ಸಾಮಾಜಿಕ, ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ಕಂಡುಬರುತ್ತದೆ. ಡಿಜಿಟಲ್ ಮಾಧ್ಯಮಗಳು ಪ್ರಕೃತಿವಿಕೋಪ. ಬಿಕ್ಕಟ್ಟಿನ ಮತ್ತು ಅಪಾಯಕಾರಿ ಸಂದರ್ಭಗಳಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಈ ಮಾಧ್ಯಮಗಳು ಜನರ ಬದುಕನ್ನು ಉಳಿಸುವ ಮತ್ತು ಅನಾಹುತಗಳನ್ನು ತಪ್ಪಿಸುವ ಸಾಧನಗಳಾಗಿ ಇಂದಿನ ಸಾಮಾಜಿಕಸ್ಥಿತಿಗತಿಯಲ್ಲಿ ಮುಂಚೂಣಿ ಹೊಂದಿವೆ. ಇತ್ತೀಚಿಗೆ ಜನ ಜೀವನವನನ್ನು ತಲ್ಲಣಗೊಳಿಸಿದ ಸಾಂಕ್ರಾಮಿಕ ರೋಗವಾದ ಕೊವಿಡ್ ೧೯ರ ಸಂದರ್ಭದಲ್ಲಿ ಡಿಜಿಟಲ್ ಮಾಧ್ಯಮಗಳು ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿವೆ, ಎಂಬುವುದು ಅಕ್ಷರಶಃ ಸತ್ಯದ ಸಂಗತಿಯಾಗಿದೆ. ಹೀಗೆ ಡಿಜಿಟಲ್ ಮಾಧ್ಯಮಗಳ ಶಕ್ತಿ ಜಗತ್ತನ್ನೇ ಕಿರಿದಾಗಿಸಿವೆ ಕಾರಣ ಪ್ರಸ್ತುತ ಎಲ್ಲಾ ಕಾರ್ಯಕ್ಷೇತ್ರ ವಲಯಗಳು ತಂತ್ರಜ್ಞಾನಕ್ಕೆ ಹೊರಳಿಕೊಳ್ಳುತ್ತಿವೆ. ಒಂದೆಡೆ ಸಕಾರತ್ಮಕವಾಗಿ ಸಾಗಿದರೆ ಇನ್ನೊಂದೆಡೆ ಆಕಸ್ಮಿಕವಾಗಿ ಘಟಿಸಿದಂತ ತಪ್ಪುಗಳಿಂದ ವಿಶ್ವಾಸವನ್ನು ಕಳೆದುಕೊಂಡು ಜನರನ್ನು ಆತಂಕಗೊಳಿಸುತ್ತವೆ. ಜಗತ್ತಿನಲ್ಲಿ ಉದ್ಭವಿಸಬಹುದಾದ ಜಟಿಲ ಸಮಸ್ಯೆ ಮತ್ತು ಪ್ರಗತಿದಾಯಕ ಬೆಳವಣಿಗೆಗೆ ಈ ಡಿಜಿಟಲ್ ಮಾಧ್ಯಮಗಳು ಬಹು ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ.
ಪ್ರಸ್ತುತ ಅಧ್ಯಯನವು ಸಾಮಾಜಿಕ ಜನರ ಜೀವನದ ಮೇಲೆ ಡಿಜಿಟಲ್ ಮಾಧ್ಯಮಗಳು ಯಾವ ರೀತಿ ಪರಿಣಾಮ ಬೀರುತ್ತಿದೆ ಮತ್ತು ಅದರ ವ್ಯಾಪ್ತಿಯನ್ನು ತಿಳಿಯುವುದು ಹಾಗೂ ಜನರ ದೈನಂದಿನ ಬದುಕಿನಲ್ಲಿ ಡಿಜಿಟಲ್ ಮಾಧ್ಯಮಗಳ ಪ್ರಭಾವವನ್ನು ಕಂಡುಕೊಳ್ಳುವುದು ಈ ಅಧ್ಯಯನದ ಉದ್ದೇಶವಾಗಿದೆ ಮತ್ತು ಡಿಜಿಟಲ್ ಮಾಧ್ಯಮಗಳು ಹೊಂದಿರುವ ಧೋರಣೆಯನ್ನು ಕಂಡುಕೊಳ್ಳುವುದು ಈ ಅಧ್ಯಯನದ ಮುಖ್ಯ ಉದ್ದೇಶವಾಗಿದೆ.
Pages: 31-33 | 525 Views 95 Downloads
How to cite this article:
ಮಹಾಲಕ್ಷ್ಮಿ ಮ ಭೂಶಿ, ಡಾ. ಶಿವಕುಮಾರ ಕಣಸೋಗಿ. ಪ್ರಸ್ತುತ ಸನ್ನಿವೇಶಗಳಲ್ಲಿ ಪೂರ್ವಭಾವಿ ಮಾಧ್ಯಮವಾಗಿ; ಡಿಜಿಟಲ್ ಮಾಧ್ಯಮಗಳು ಒಂದು ಸಮರ್ಥನೆ. Int J Kannada Res 2022;8(1):31-33.