2021, Vol. 7 Issue 3, Part B
ಹೊಸದುರ್ಗ ತಾಲ್ಲೂಕಿನ ಶಾಸನೋಕ್ತ ಸ್ಥಳನಾಮಗಳು
Author(s): ಶಿವಾನಂದಯ್ಯ
Abstract: ಸ್ಥಳನಾಮಗಳು ಒಂದು ಪ್ರದೇಶದ ಸಾಂಸ್ಕೃತಿಕ ಚರಿತ್ರೆಯನ್ನು ಕಟ್ಟಿಕೊಳ್ಳಲು ನೆರವಾಗುತ್ತವೆ. ಚಲನಶೀಲ ಗುಣದಿಂದ ಕೂಡಿರುವ ಸ್ಥಳನಾಮಗಳನ್ನು ಬಹುಮುಖ್ಯ ಆಕರಗಳೆಂದು ಪರಿಗಣಿಸಲಾಗಿದೆ. ಸ್ಥಳನಾಮ ಅಧ್ಯಯನ ಬಹುಶಿಸ್ತಿನ ನೆಲೆಯಿಂದ ಕೂಡಿದೆ.ಭಾಷಾಶಾಸ್ತ್ರ, ಚರಿತ್ರೆ, ಜಾನಪದ, ಭೂಗೋಳಶಾಸ್ತ್ರ, ಮಾನವಶಾಸ್ತ್ರ, ಕುಲವಿಜ್ಞಾನ ಮುಂತಾದ ಹಲವು ಜ್ಞಾನಕ್ಷೇತ್ರಗಳ ನೆರವು ಅಗತ್ಯ. ಜೊತೆಗೆ ಎಲ್ಲ ಜ್ಞಾನಶಿಸ್ತುಗಳಿಗೆ ಸ್ಥಳನಾಮಗಳು ಮುಖ್ಯ ಆಕರವಾಗಿವೆ. ಸ್ಥಳನಾಮಗಳಲ್ಲಿ ಆ ಪ್ರದೇಶದ ಭೌಗೋಳಿಕ ವೈಶಿಷ್ಟ್ಯಗಳು ಅಂತರ್ಗತವಾಗಿರುವುದನ್ನು ಕಾಣಬಹುದು. ಬಹುಸಂಸ್ಕೃತಿಯ ಪ್ರತೀಕವಾಗಿರುವ ವಿವಿಧ ಸಮುದಾಯ, ಕಸುಬು, ವ್ಯಾಪಾರ, ಆಡಳಿತ, ದೈವಸಂಬಂಧಿ ಹೆಸರುಗಳು ಸ್ಥಳನಾಮಗಳಲ್ಲಿ ಕಂಡುಬರುತ್ತವೆ. ಇತಿಹಾಸ, ಭಾಷೆ ಮತ್ತು ಸಂಸ್ಕೃತಿ ಶೋಧಕ್ಕೆ ಸ್ಥಳನಾಮಗಳ ಆಕರವಾಗಿ ನೆರವಾಗುವುದರಿಂದ ಸ್ಥಳನಾಮ ಅಧ್ಯಯನ ಪ್ರಸ್ತುತವೆನಿಸುತ್ತದೆ.
Pages: 102-114 | 889 Views 382 Downloads
How to cite this article:
ಶಿವಾನಂದಯ್ಯ. ಹೊಸದುರ್ಗ ತಾಲ್ಲೂಕಿನ ಶಾಸನೋಕ್ತ ಸ್ಥಳನಾಮಗಳು. Int J Kannada Res 2021;7(3):102-114.