2021, Vol. 7 Issue 3, Part A
ಹೊಸದುರ್ಗ ತಾಲೂಕಿನ ಸ್ಥಳನಾಮಗಳಲ್ಲಿನ ವಾರ್ಗಿಕಗಳು
Author(s): ಡಾ.ಕೆ.ಶಿವಾನಂದಯ್ಯ
Abstract: ಸ್ಥಳನಾಮಗಳು ನಿರ್ದಿಷ್ಟ ಭೌಗೋಳಿಕ ಪ್ರದೇಶದ ರಾಜಕೀಯ, ಸಾಮಾಜಿಕ, ಧಾರ್ಮಿಕ, ಭಾಷಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಜೀವದ್ರವ್ಯವನ್ನು ಅಂತರ್ಗತಗೊಳಿಸಿಕೊಂಡಿರುತ್ತವೆ. ಶಾಸನಗಳಿಗಿಂತಲೂ ಪ್ರಾಚೀನವಾದ ಸ್ಥಳನಾಮಗಳು ಪ್ರದೇಶವೊಂದರ ಜನಜೀವನದ ಹೆಗ್ಗುರುತಾಗಿ ನೆಲೆ ನಿಂತಿರುತ್ತವೆ. ಬಹು ಸಂಸ್ಕೃತಿಯು ಕರ್ನಾಟಕದ ವೈಶಿಷ್ಟ್ಯವಾಗಿದೆ. ಅದರ ಬೇರುಗಳನ್ನು ಸಂಸ್ಕೃತಿಯ ಪ್ರತೀಕಗಳಂತಿರುವ ಸ್ಥಳನಾಮಗಳಲ್ಲೂ ಕಾಣಬಹುದು. ಮಾನವ ತಾನು ನಿಂತ ನೆಲೆಯನ್ನೇ ತನ್ನೆಲ್ಲಾ ಸಿದ್ಧಿಯ ಕ್ಷೇತ್ರವನ್ನಾಗಿಸಿಕೊಂಡನು. ಊರು-ಬದುಕಿನ ಸಂಬಂಧ ಅವಿನಾಭಾವ. ಮಾನವ ಜೀವನ ಇತಿಹಾಸಕ್ಕೆ ನೆಲೆನಿಂತ ಊರು ಪ್ರಮುಖ ಸಾಕ್ಷಿಯಾಯಿತು. ಸ್ಥಳನಾಮಗಳು ಬಹುಸಂಸ್ಕೃತಿ ಮತ್ತು ಹಲವು ಜ್ಞಾನಶಾಖೆಗಳ ಆಕರಗಳಾಗಿವೆ. ಮತ್ತು ನೆಲಮೂಲದ ಸಂಸ್ಕೃತಿಯ ಜೀವಧಾತುವನ್ನು ಗರ್ಭೀಕರಿಸಿಕೊಂಡಿರುತ್ತವೆ. ಐತಿಹಾಸಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವಿರುವುದರಿಂದ ಸ್ಥಳನಾಮಗಳ ಅಧ್ಯಯನ ಸಮಕಾಲೀನ ಕಾಲದಲ್ಲೂ ಪ್ರಸ್ತುತವೆನಿಸಿದೆ.
Pages: 15-24 | 375 Views 50 Downloads
How to cite this article:
ಡಾ.ಕೆ.ಶಿವಾನಂದಯ್ಯ. ಹೊಸದುರ್ಗ ತಾಲೂಕಿನ ಸ್ಥಳನಾಮಗಳಲ್ಲಿನ ವಾರ್ಗಿಕಗಳು. Int J Kannada Res 2021;7(3):15-24.