2021, Vol. 7 Issue 2, Part C
ವರ್ತಮಾನದ ಕಲಿಕೆ ಬಯಸುತ್ತಿರುವ ಬೋಧನೆಯ ಹೊಸತನಗಳ ಸಾಧ್ಯತೆಗಳು
Author(s): ಮಲ್ಲೇಶಪ್ಪ ಸಿದ್ರಾಂಪೂರ
Abstract: ಇದು ಅತ್ಯಂತ ವೇಗದಿಂದ ಬದಲಾಗುತ್ತಿರುವ ಕಾಲ. ಕಾಲಕ್ಕೆ ತಕ್ಕಂತೆ ಬದುಕಿನಲ್ಲಿ ಬದಲಾವಣೆಗಳು ಆಗಬೇಕಾದುದು ಅನಿವಾರ್ಯ. ಅಂತಹ ಬದಲಾವಣೆಗಳಲ್ಲಿ ಕಲಿಕೆಯ ಬದಲಾವಣೆಯೂ ಒಂದು. ಗುರುಕುಲ ಪದ್ಧತಿಯಿಂದ ಪ್ರಾರಂಭವಾದ ಈ ದೇಶದ ಕಲಿಕೆ ವಿಧಾನವು ಇಂದು ತರಗತಿಗಳಿಲ್ಲದೆ ಕೇವಲ ಮನೆಯಲ್ಲಿ ಕುಳಿತು ಕಲಿಯಬಹುದಾದ ಎನ್ನುವ ದಿನಗಳು ಬಂದಿವೆ. ಇಂತಹ ಸಂದರ್ಭದಲ್ಲಿ ವರ್ತಮಾನದ ಕಲಿಕೆಯು ಯಾವೆಲ್ಲ ಬಗೆಯ ಹೊಸತನಗಳನ್ನು ಬಯಸುತ್ತಿದೆ? ಅಂತಹ ಹೊಸತನ ಎನ್ನುವ ಪರಿಕಲ್ಪನೆ ಹುಟ್ಟಿಕೊಳ್ಳಲು ಕಾರಣಗಳೇನು? ಹೊಸತನವನ್ನು ಕಲಿಸುವ ಭರದಲ್ಲಿ ಕಲಿಕೆಯ ಗುಣಮಟ್ಟ ಎಂತಹದ್ದು ಎನ್ನುವುದನ್ನು ಪರೀಕ್ಷಿಸಲಾಗುತ್ತಿದೆಯೇ? ವಿಜ್ಞಾನ, ತಂತ್ರಜ್ಞಾನದಂತಹ ಕಲಿಕೆಯ ವಿಧಾನಗಳಿಗೂ ಹಾಗೂ ಪರಂಪರಾಗತವಾಗಿ ಬಂದಂತಹ ಕೋರ್ಸ್‍ಗಳ ಕಲಿಕೆಗೂ ಈ ಹೊಸತನ ಎನ್ನುವುದರಲ್ಲಿ ವ್ಯತ್ಯಾಸವಿದೆಯೇ? ಅದರಲ್ಲೂ ಭಾಷೆಯ ಬೋಧನೆಯಲ್ಲಿ ಹೊಸತನಗಳನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ? ಎನ್ನುವಂತಹ ಪ್ರಶ್ನೆಗಳಿಗನ್ನಿಟ್ಟುಕೊಂಡು ಈ ಪ್ರಬಂಧವನ್ನು ಬರೆಯಲಾಗಿದೆ.
ಆಧುನಿಕ ತಂತ್ರಜ್ಞಾನವು ಭಾಷಾ ಕಲಿಕೆಯಲ್ಲಿ ಹೇಗೆಲ್ಲಾ ಸಹಾಯಕವಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಒಂದು ಸೀಮಿತ ಪ್ರದೇಶದ ಪ್ರಾಂತೀಯ ಭಾಷೆಗಳ ಕಲಿಕೆಯಲ್ಲಿ ತಂತ್ರಜ್ಞಾವನ್ನು ಹೇಗೆ ದುಡಿಸಿಕೊಳ್ಳಲಾಗುತ್ತಿದೆ. ಇದನ್ನು ಕಲಿಸುವವರು ಮತ್ತು ಕಲಿಯುವವರು ಎಷ್ಟರ ಪ್ರಮಾಣದಲ್ಲಿ ಬಳಸುತ್ತಿದ್ದಾರೆ. ಈ ಬಳಸುವಿಕೆ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ. ಎನ್ನುವ ಅಂಶಗಳು ಇಲ್ಲಿ ಮುಖ್ಯವಾಗಿ ಚರ್ಚಿಸಲ್ಪಟ್ಟಿವೆ. ತರಗತಿಗಳಿಗೆ ಹೋಗಿ ನೇರವಾಗಿ ಕಲಿತು, ಅಲ್ಲಿಂದ ಗ್ರಂಥಾಲಯಗಳಿಗೆ ಹೋಗಿ ಪುಸ್ತಕಗಳನ್ನು ಹುಡುಕಿಕೊಂಡು ಟಿಪ್ಪಣಿಗಳನ್ನು ಮಾಡಿಕೊಳ್ಳುವ ಕಾಲವಿತ್ತು. ಇಂದು ಮನೆಯಲ್ಲಿಯೇ ಕುಳಿತು ಇಂಟರ್‍ನೆಟ್‍ನ ಸಹಾಯದಿಂದ ಇ-ಗ್ರಂಥಾಲಯಗಳಿಂದ ಪುಸ್ತಕಗಳನ್ನು ಓದಬಹುದು. ಜೊತೆಗೆ ಟ್ಯಾಬ್‍ಗಳನ್ನು ಬಳಸಿಕೊಂಡು ಎಲ್ಲೆಂದರಲ್ಲಿ ಇ-ಪುಸ್ತಕಗಳನ್ನು ಓದಬಹುದು. ಓದುವುದಕ್ಕೆ ಸಾಕಾಯಿತು ಅನ್ನಿಸಿದಾಗ ಕೇಳುವ ಪುಸ್ತಕಗಳನ್ನು ಕೇಳಬಹುದು. ಹೀಗೆ ಆಧುನಿಕತೆ ಎನ್ನುವುದು ಅನೇಕ ರೀತಿಯಲ್ಲಿ ಕಲಿಕೆಯ ಪಲ್ಲಟಗಳನ್ನು ಉಂಟುಮಾಡಿದೆ. ಅಂತಹ ಪಲ್ಲಟಗಳನ್ನು ಗುರುತಿಸುವುದೇ ಈ ಪ್ರಬಂಧದ ಮುಖ್ಯ ಉದ್ದೇಶ.
Pages: 179-181 | 525 Views 80 Downloads
How to cite this article:
ಮಲ್ಲೇಶಪ್ಪ ಸಿದ್ರಾಂಪೂರ. ವರ್ತಮಾನದ ಕಲಿಕೆ ಬಯಸುತ್ತಿರುವ ಬೋಧನೆಯ ಹೊಸತನಗಳ ಸಾಧ್ಯತೆಗಳು. Int J Kannada Res 2021;7(2):179-181.