Contact: +91-9711224068

Kannada Journal

International Journal of Kannada Research

  • Printed Journal
  • Indexed Journal
  • Refereed Journal
  • Peer Reviewed Journal

Impact Factor: RJIF 4.89

ಕೊರೊನಾ ವೈರಸ್-19 ರೋಗಿಗಳ ಮನೋದೈಹಿಕ ಅಸ್ವಸ್ಥತೆಗೆ (Psychosomatic Illness) ಸಂಬಂಧಿಸಿದಂತೆ ಬಾಯಿ ಮತ್ತು ಕರುಳಿನ ಆರೋಗ್ಯದ ಪಾತ್ರ

2021, Vol. 7 Issue 2, Part B
ಕೊರೊನಾ ವೈರಸ್-19 ರೋಗಿಗಳ ಮನೋದೈಹಿಕ ಅಸ್ವಸ್ಥತೆಗೆ (Psychosomatic Illness) ಸಂಬಂಧಿಸಿದಂತೆ ಬಾಯಿ ಮತ್ತು ಕರುಳಿನ ಆರೋಗ್ಯದ ಪಾತ್ರ
Author(s): Dr. Ravish H, Deepak SN, Dr. Srinivas H, Dr. Darshana D, Dr. Manohar Puttanna and Dr. Gunasheela BV
Abstract: ಕೋವಿಡ್-19 ಜನರ ವ್ಯಕ್ತಿಗತ ಜೀವನ ಮತ್ತು ಬದುಕಿನ ಶೈಲಿಯನ್ನು ಆಳವಾಗಿ ಪ್ರಭಾವಿಸಿದೆ. ವೈದ್ಯರು ಮತ್ತು ರೋಗಿಗಳು ಈಗ ಭಯಭೀತರಾಗಿದ್ದಾರೆ. ಇದರ ಪ್ರತಿಕ್ರಿಯೆಯಾಗಿ ಅಮೆರಿಕದಲ್ಲಿ ಸುಮಾರು ಶೇಕಡಾ 10.7ರಷ್ಟು ಜನರಿಗೆ ತಮ್ಮನ್ನು ತಾವು ಘಾಸಿಪಡಿಸಿಕೊಳ್ಳುವ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಗಳು ಬಂದಿವೆ ಎಂದು ಗ್ರಹಿಸಲಾಗಿದೆ. ಈ ಬಗ್ಗೆ ಪ್ರಕಟವಾಗಿರುವ ಲೇಖನವೊಂದರ ಪ್ರಕಾರ ಜನರ ಮಾನಸಿಕ ಸೌಖ್ಯದ ಸಮಸ್ಯೆಗಳು ಹಿಂದಿನ ವರ್ಷಕ್ಕಿಂತ ಈಗ ಮೂರು-ನಾಲ್ಕು ಪಟ್ಟು ಹೆಚ್ಚಾಗಿದೆ. ಕರೊನಾವೈರಸ್ಸಿನಿಂದ ಗಂಟಲಿನ ಜೊಲ್ಲುರಸಗ್ರಂಥಿಗಳು (ಸಲೈವರಿ ಗ್ಲಾಂಡ್ಸ್) ಬಾಧಿತವಾಗಿವೆ. ವೈರಸ್ ಸೋಂಕು ತಗುಲಿರುವ ಅನೇಕ ಜನರು ಆಂಜಿಯೋಟೆನ್ಸಿನ್ ಕನ್ವರ್ಟಿಂಗ್ ಎನ್ಜೈಮ್ (ಎಸಿಇ) ಮತ್ತು ಆಂಜಿಯೋಟೆನ್ಸಿನ್ ಬ್ಲಾಕರ್ಗಳನ್ನು ತೆಗೆದುಕೊಳ್ಳುತ್ತಿದ್ದು ಅವರಲ್ಲಿ ಡಿಸ್ಜಿಯುಸಿಯಾ ಮತ್ತು ಅನೋಸ್ಮಿಯಾಗಳು ಬೆಳವಣಿಗೆಯಾಗಿವೆ. ಇದು ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್ ಕರೊನಾವೈರಸ್ಸಿನ (SARS-CoV-2) ಸೋಂಕಿನಲ್ಲಿ ಎಸಿಇ ರಿಸೆಪ್ಟರ್ಗಳ ಪಾತ್ರವನ್ನು ಎತ್ತಿ ತೋರಿಸಿದೆ. ಸಾಕಷ್ಟು ನಿದ್ರೆ ಮಾಡುವುದು, ತಂತ್ರಜ್ಞಾನ ಸಾಧನಗಳ ವ್ಯಸನ ಮತ್ತು ಬಳಕೆಯನ್ನು ಕಡಿಮೆ ಮಾಡುವುದರಿಂದ ಆಗಬಹುದಾದ ತೊಂದರೆಗಳನ್ನು ತಪ್ಪಿಸಬಹುದು. ಹಾಗೆಯೇ ಕೆಲಸದ ವೇಳೆಯಲ್ಲಿ ಮೊಬೈಲ್ ಫೋನುಗಳ ಬಳಕೆಯನ್ನು ಮಾಡುವುದರಿಂದ ಅವುಗಳಿಂದ ಆಗುವ ಆತಂಕ ಕಡಿಮೆಯಾಗುತ್ತದೆ. ವಿಟಮಿನ್ ಸಿ ಇರುವ ಆಹಾರಗಳನ್ನು ಸೇವಿಸುವುದರಿಂದ ವೈರಸ್ ಸೋಂಕಿನ ವಿರುದ್ಧ ರಕ್ಷಣೆ ಪಡೆಯಬಹುದು. ಅಧ್ಯಯನಗಳ ಪ್ರಕಾರ ವಿಟಮಿನ್ ಡಿ ಇರುವ ಸಾಕಷ್ಟು ಆಹಾರ ಸೇವನೆಯಿಂದ ಕೋವಿಡ್-19 ಸೋಂಕಿತರಲ್ಲಿ ರಸಧಾತುಗಳ (ಹ್ಯೂಮರಲ್) ಮತ್ತು ಕೋಶಿಕ ರಕ್ಷಣಾ ಪ್ರತಿಕ್ರಿಯೆ (ಸೆಲ್ಯುಲರ್ ಇಮ್ಯೂನ್ ರೆಸ್ಪಾನ್ಸ್) ಹೆಚ್ಚಾಗುತ್ತದೆ ಮತ್ತು ಕರುಳಿನ ಸೋರುವಿಕೆ (ಇಂಟಸ್ಟೈನಲ್ ಲೀಕಿನೆಸ್) ಕಡಿಮೆಯಾಗುತ್ತದೆ.
Pages: 75-80  |  446 Views  53 Downloads
How to cite this article:
Dr. Ravish H, Deepak SN, Dr. Srinivas H, Dr. Darshana D, Dr. Manohar Puttanna, Dr. Gunasheela BV. ಕೊರೊನಾ ವೈರಸ್-19 ರೋಗಿಗಳ ಮನೋದೈಹಿಕ ಅಸ್ವಸ್ಥತೆಗೆ (Psychosomatic Illness) ಸಂಬಂಧಿಸಿದಂತೆ ಬಾಯಿ ಮತ್ತು ಕರುಳಿನ ಆರೋಗ್ಯದ ಪಾತ್ರ. Int J Kannada Res 2021;7(2):75-80.
Related Journal Subscription
International Journal of Kannada Research

International Journal of Kannada Research

Call for book chapter
Journals List Click Here Research Journals Research Journals
International Journal of Kannada Research