2021, Vol. 7 Issue 1, Part A
ಮಂಟೇಸ್ವಾಮಿ ಮತ್ತು ಅನನ್ಯ ಭಕ್ತಿ ಭಾವದ ದೊಡ್ಡಮ್ಮ ತಾಯಿ
Author(s): ಡಾ.ಚೆಲುವರಾಜು
Abstract: ಶಿಕ್ಷಣವಿಲ್ಲದ ನಮ್ಮ ಗ್ರಾಮೀಣ ಜನಸಾಮಾನ್ಯರ ಮಾತೇ ಜನಪದ ಎನ್ನಬಹುದಾದರೂ ಈ ಪದ ಇನ್ನೂ ವಿಶಾಲವಾದ ಅರ್ಥವನ್ನು ಹೊಂದಿದೆ. ಮನುಕುಲದ ಮೊದಲ ಇತಿಹಾಸವೇ ಜನಪದ. ಗ್ರಾಮೀಣ ಜನತೆಯ ಮಾತುಕತೆ, ನಡವಳಿಕೆಗಳು, ಆಚಾರ ವಿಚಾರ, ಪದ್ಧತಿಗಳು, ನಂಬಿಕೆ, ಸಂಪ್ರದಾಯ, ಧಾರ್ಮಿಕತೆ, ತಾತ್ವಿಕ ಸಂಗತಿಗಳು ಮೊದಲಾದವುಗಳನ್ನು ಜನಪದ ಒಳಗೊಂಡು ಜಾನಪದವಾದರೆ, ಈ ಎಲ್ಲ ಸಮಸ್ತವನ್ನು ಒಳಗೊಂಡದ್ದು ಜಾನಪದ. ಜನಪದ ಮಹಾಕಾವ್ಯವು ಮೌಖಿಕ ಪರಂಪರೆಯಾಗಿದ್ದು ಸಾಂಸ್ಕøತಿಕ ಪುರಾಣವೂ ಆಗಿದೆ. ಒಂದು ವಿಶಿಷ್ಟ ಭೂ ಪ್ರದೇಶ ಅಥವಾ ಬುಡಕಟ್ಟು ಪರಂಪರೆಯಲ್ಲಿ ಸೃಷ್ಟಿಯಾದ ಅನೇಕ ಕಥಾನಕಗಳಲ್ಲಿ ಮಂಟೇಸ್ವಾಮಿ ಜನಪದ ಕಾವ್ಯವು ತುಂಬಾ ಮಹತ್ವದ್ದು. ಜನಪದ ಸಾಹಿತ್ಯ ಪ್ರಕಾರಗಳಲ್ಲಿ ಜನಪದ ಕಾವ್ಯಗಳೂ ಒಂದು. ಜನಪದ ಮಹಾಕಾವ್ಯ ಆಯಾ ಕಾಲಘಟ್ಟ ಮನೋಧರ್ಮಗಳ ಹಿನ್ನೆಲೆಯಲ್ಲಿ ಹುಟ್ಟುತ್ತವೆ. ಜನಪದ ಮಹಾಕಾವ್ಯಗಳು ಪದ್ಯ ರೂಪೀ ಛಂದೋಬದ್ಧ ರಚನೆ ಮೌಖಿಕ ಪರಂಪರೆಯಾದ್ದರಿಂದ ಹೀಗೆ ಎನ್ನುವ ನಿರ್ದಿಷ್ಟ ಗುಣಲಕ್ಷಣಗಳು ಕಡ್ಡಾಯವಿಲ್ಲ. ನಾಗರೀಕತೆಯ ಸೋಂಕಿಲ್ಲದ ಶುದ್ಧ ನೈಜ ಅನುಭವಗಳಿಂದ ಹೊಮ್ಮಿದ ಜನಪದರ ವಾಣಿಯೇ ಈ ಜಾನಪದ.
Pages: 42-45 | 72 Views 19 Downloads