2017, Vol. 3 Issue 4, Part C
ಸಮಕಾಲೀನ ಕನ್ನಡ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ
Author(s): gÀªÉÄñÀ. ¹
Abstract: ಆಧುನಿಕ ಕಾಲದಲ್ಲಿ ವಿದ್ಯಾಭ್ಯಾಸದ ಕಾರಣವಾಗಿ, ಬಹಳ ಜನ ಮಹಿಳೆಯರು ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ತಮ್ಮ ಅಭಿವ್ಯಕ್ತಿಗಾಗಿ ದುಡಿಸಿಕೊಂಡಿದ್ದಾರೆ. ವಸ್ತುವಿನ ಆಯ್ಕೆಯಲ್ಲಿ ಕೂಡ ಬದುಕಿನ ಎಲ್ಲಾ ಕ್ಷೇತ್ರಗಳನ್ನು ಸ್ವರ್ಶಿಸಿದ್ದಾರೆ. ಬಹುಶಃ ಹೆಚ್ಚಿನ ಸಂಖ್ಯೆಯಲ್ಲಿ ಕಾದಂಬರಿ ಪ್ರಕಾರವು ಜನ ಮೆಚ್ಚಿಗೆಯನ್ನು ಪಡೆದಿದೆ. ಅನೇಕ ಕಾದಂಬರಿಗಳು-ಕಾವ್ಯಗಳು-ಬೇರೆ ಭಾಷೆಗಳಿಗೂ ಅನುವಾದಗೊಂಡಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ- ನಾಡೋಜಗಳಂಥ ಗೌರವಗಳಿಗೆ ಪಾತ್ರರಾದವರೂ ಆಧುನಿಕ ಕನ್ನಡ ಸಾಹಿತ್ಯದಲ್ಲಿದ್ದಾರೆ. ಮಹಾಕಾವ್ಯಗಳು ನಮಗೆ ಲಭ್ಯ ಇವೆ.ವಿಮರ್ಶಾ ಕ್ಷೇತ್ರ- ಸಂಶೋಧನಾ ಕ್ಷೇತ್ರಗಳು, ಹಿಂದೆಂದಿಗಿಂತಲೂ ಇಂದು ತಮ್ಮನ್ನು ಹೆಚ್ಚು ವಿಸ್ತರಿಸಿಕೊಂಡಿವೆ. ಆದರೂ ಗಣನೀಯ ಸಂಖ್ಯೆಯ ಬಾಹುಳ್ಯವಿದ್ದರೂ, ಅದಕ್ಕೆ ನವ-ನವೀನ ಆಯಾಮಗಳು ಏಕೆ ದಕ್ಕಲ್ಲಿಲ್ಲ? ಎನ್ನುವುದೊಂದು ಪ್ರಶ್ನೆ. ಅಕ್ಕಮಹಾದೇವಿಯಿಂದ ಹಿಡಿದು ತಿರುಮಲಾಂಬೆಗೆ, ಜಯದೇವಿತಾಯಿ ಲಿಗಾಡೆ, ಅನುಪಮಾ, ನಿರಂಜನ, ನಿರುಪಮಾ, ಕಮಲಾ ಹಂಪನಾ, ಟಿ.ಸುನಂದಮ್ಮ, ವೈದೇಹಿ, ಸಾರಾ ಅಬುಬಕ್ಕರ, ಶಾಂತಾ ದೇವಿ ಮಾಳವಾಡ, ವೀಣೆ ಶಾಂತೇಶ್ವರ, ನೇಮಿಚಂದ್ರ, ಪ್ರತಿಭಾ, ಲಲಿತ ಸಿದ್ಧ ಬಸವಯ್ಯ....ಹೇಗೆ ಪಟ್ಟಿಯನ್ನೇ ಮಾಡಬಹುದು. ಇವರೆಲ್ಲ ಕನ್ನಡದ ವಿವಿಧ ಪ್ರಕಾರಗಳನ್ನು ಸಮೃದ್ಧಗೊಳಿಸಿದವರು. ಗಮನಾರ್ಹ ಬರವಣಿಗೆಯನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದವರು. ಇತ್ಯಾದಿ ವಿಷಯವನ್ನೆಲ್ಲ ಕನ್ನಡ ಸಾಹಿತ್ಯವನ್ನು ಓದುವಂತ ಸಹೃದಯರಿಗೆ ’ಸಮಕಾಲೀನ ಕನ್ನಡ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ” ಏನು? ಎಂಬ ಕಿರು ಪ್ರಬಂಧವನ್ನು ಸೂಕ್ಷ್ಮವಾಗಿ ಪರಿಚಯ ಮಾಡಿಕೊಡುವುದು ಈ ಪ್ರಬಂಧದ ಮುಖ್ಯ ಉದ್ದೇಶವಾಗಿರುತ್ತದೆ.
Pages: 143-150 | 1052 Views 69 Downloads
How to cite this article:
gÀªÉÄñÀ. ¹. ಸಮಕಾಲೀನ ಕನ್ನಡ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ. Int J Kannada Res 2017;3(4):143-150.